ಗ್ರಾಮೀಣ ಜನತೆ ಕೃಷಿಯ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು: ಮತ್ತಿಘಟ್ಟ ಎಂ.ಆರ್ ವಾಸು

Upayuktha
0

ಕೆ.ಆರ್‌ ಪೇಟೆಯಲ್ಲಿ ಉಚಿತ ಆರೋಗ್ಯ ಶಿಬಿರ




ಕೆ.ಆರ್.ಪೇಟೆ: ಗ್ರಾಮೀಣ ಭಾಗದ ಜನತೆ ಕೃಷಿ ಚಟುವಟಿಕೆಯ ಜೊತೆ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಇದ್ದರೆ ಬೇರೆ ಏನೂ ಬೇಕಾದರೆ ಸಂಪಾದನೆ ಮಾಡಬಹುದು. ಹಾಗಾಗಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಮೈಸೂರು ಪ್ಯಾಲೇಸ್ ಸಿಟಿ ಲಯನ್ ಕ್ಲಬ್-317 ಸಂಸ್ಥೆಯ ಅಧ್ಯಕ್ಷ ಮತ್ತಿಘಟ್ಟ ಎಂ.ಆರ್. ವಾಸು ಅವರು ತಿಳಿಸಿದರು.


ತಾಲೂಕಿನ ಬೂಕನಕೆರೆ ಹೋಬಳಿ ಮಡವಿನಕೋಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ (ಆಸ್ಪತ್ರೆ) ಆವರಣದಲ್ಲಿ ಮೈಸೂರು ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ, ಚಿರಾಗ್ ಮೋಟಾರ್ಸ್ ಹಾಗೂ ಮಡುವಿನಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಾಕ್‌ ಮತ್ತು ಶ್ರವಣ ದೋಷ ಹಾಗೂ ಕಣ್ಣು ಹಾಗೂ ದಂತ ದೋಷಗಳ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಗುಣಪಡಿಸಬಹುದು ಮತ್ತು ಗ್ರಾಮಾಂತರ ಭಾಗದ ಜನರು ಇದರ ಸದುಪಯೋಗ ಪಡೆಯಲೆಂದು ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಇಂತಹ ಉಪಯುಕ್ತ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡರೆ ಆರೋಗ್ಯದ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ವಾಸು ಅವರು ಹೇಳಿದರು.



ಪ್ರಾಸ್ತಾವಿಕ ನುಡಿಗಳನ್ನಾಡಿದ ಚಿರಾಗ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಡಾ.ಎಂ.ಪಿ ಲೋಕೇಶ್ ಅವರು ಲಯನ್ಸ್‌ ಕ್ಲಬ್ ಸಂಸ್ಥೆಯು ಬಡಜನರು ಹಾಗೂ ಸಾರ್ವಜನಿಕರ ಸೇವೆಗಾಗಿಯೇ ಇರುವ ಏಕೈಕ ಸಂಸ್ಥೆಯಾಗಿದೆ.  ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಯಾರಿಗೆ ಅಗತ್ಯ ಇರುತ್ತದೆಯೋ ಅಲ್ಲಿ ಸೇವೆ ಮಾಡುವ ಕೆಲಸ ನಮ್ಮ ಲಯನ್ಸ್ ಕ್ಲಬ್ ವತಿಯಿಂದ ನಡೆಯುತ್ತಿದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ, ನಮ್ಮ ಪೂರ್ವಜರ ದಿನಗಳಲ್ಲಿ ವಾಂತಿ-ಭೇದಿ, ಟೈಫಾಯಿಡ್‌, ಕ್ಷಯ,  ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್‌, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ.ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ. ಇದಕ್ಕಾಗಿ ನಮ್ಮ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ  ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಲಯನ್ಸ್ ಕ್ಲಬ್ ಜೊತೆ ಕೈಜೋಡಿಸಲಾಗಿದೆ.

ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಸರ್ವಶ್ರೇಷ್ಠ ವಾದುದು. ಹಾಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು  ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು‌ ಎಂ.ಪಿ.ಲೋಕೇಶ್  ಮನವಿ‌ ಮಾಡಿದರು.



ಈ ಕಾರ್ಯಕ್ರಮದಲ್ಲಿ ಮಾಡುವಿನಕೊಡಿ ಪ್ರಾಥಮಿಕ ಅರೋಗ್ಯ ಕೇಂದ್ರ ಡಾ.ವಿಶ್ವನಂದ್, ಚಿರಾಗ್ ಮೋಟಾರ್ಸ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ.ಲೋಕೇಶ್,  ಮೈಸೂರು ಪ್ಯಾಲೇಸ್ ಸಿಟಿ ಲಯನ್ ಕ್ಲಬ್-317 ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮೀಗೌಡ, ಪದಾಧಿಕಾರಿಗಳಾದ  ಜಯಕುಮಾರ್, ಡಿ.ಪಿ.ಪ್ರಕಾಶ್, ಕೆ.ಎಸ್.ಪ್ರಕಾಶ್, ಮಹಾದೇವ್, ಮೂರ್ತಿ, ಮಹದೇವಸ್ವಾಮಿ, ಕಾಳಯ್ಯ, ಶಿವಕುಮಾರ್, ಲಯನ್ ಡಾ ರವಿ ಕಿರಣ್,ಲಯನ್ ಪುಟ್ಟಸ್ವಾಮಿ ಗೌಡ,ಲಯನ್ ಕಾಳಯ್ಯ, ಲಯನ್ ಮೇಲ್ವಿನ್, ಲಯನ್ ಶಿವಕುಮಾರ್,ಲಯನ್ ಡಿ ಪಿ ಪ್ರಕಾಶ್, ಕೆ ಎಸ್ ಪ್ರಕಾಶ್ ಜೈಕುಮಾರ್, ಬೆಂಗಳೂರಿನ  ಡಾ ಎಸ್ ಆರ್ ಚಂದ್ರಶೇಖರ್  ವಾಕ್ ಮತ್ತು ಶ್ರವಣ ಸಂಸ್ಥೆಯ ವೈದ್ಯರಾದ ಡಾ.ಜನ್ನ, ಡಾ.ಜಿನ್ನಾ, ಡಾ.ಇಕ್ರಂಪಾಷಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.



100 ಮಂದಿ ಕಣ್ಣು ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದರು. 61 ಮಂದಿ ವಾಕ್ ಮತ್ತು  ಶ್ರವಣ ದೋಷ ತಪಾಸಣೆ ಮಾಡಿಸಿಕೊಂಡರು. 85ಮಂದಿ ದಂತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದು ಕೊಂಡರು. ಒಟ್ಟಾತೆ  250ಕ್ಕೂ ಹೆಚ್ಚು  ಮಂದಿ ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನ ಪಡೆದುಕೊಂಡರು. ಅರ್ಹ ಫಲಾನುಭವಿಗಳಿಗೆ ಶ್ರವಣೋಪಕರಣ ಹಾಗೂ  ಕನ್ನಡಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top