ಭರದಿಂದ ಸಾಗಿದೆ ಕಾಮಗಾರಿ, ಸಾರ್ವಜನಿಕರ ಸಂತಸ
ಕೆ.ಆರ್.ಪೇಟೆ ತಾಲೂಕಿನ ಗಡಿಗ್ರಾಮವಾದ ಸಿಂಗನಹಳ್ಳಿ ಬಳಿ ಇರುವ ಮೈಸೂರು-ಹಾಸನ ರೈಲ್ವೆ ಗೇಟ್ನ ಬಳಿ ಪ್ರಯಾಣಿಕರು ಗೇಟ್ ತೆರೆಯುವುದನ್ನು ಕಾಯುತ್ತಿರುವುದು. 4 ದಶಕಗಳ ರೈಲ್ವೆ ಗೇಟಿನ ಸಮಸ್ಯೆಗೆ ಮೇಲ್ಸೆತುವೆ ಮೂಲಕ ಸದ್ಯದಲ್ಲಿಯೇ ಮುಕ್ತಿ ದೊರೆಯಲಿದೆ.
ವಿಶೇಷ ವರದಿ: ಆರ್.ಶ್ರೀನಿವಾಸ್, ಕೆ.ಆರ್.ಪೇಟೆ
ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ನೇರವಾಗಿ ಸಂಪರ್ಕ ನೀಡುವ ಕೆ.ಆರ್.ಪೇಟೆ- ಬೇರ್ಯ ,ಸಾಲಿಗ್ರಾಮ ರಸ್ತೆಯ ಮಧ್ಯದ ಕೆ.ಆರ್.ಪೇಟೆ ತಾಲೂಕಿನ ಗಡಿಗ್ರಾಮವಾದ ಸಿಂಗನಹಳ್ಳಿ ಬಳಿ ಇರುವ ಮೈಸೂರು-ಹಾಸನ ರೈಲ್ವೆ ಗೇಟ್ಗೆ ಸಧ್ಯದಲ್ಲಿಯೇ ಮುಕ್ತಿ ದೊರೆಯುತ್ತಿದ್ದು. ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು ನಾಲ್ಕು ದಶಕಗಳ ಸಮಸ್ಯೆಗೆ ಸಧ್ಯದಲ್ಲಿಯೇ ಮುಕ್ತಿ ದೊರೆಯುತ್ತಿರುವುದರಿಂದ ಈ ಭಾಗದ ನಾಗರೀಕರು ಹಾಗೂ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರು-ಹಾಸನ ರೈಲ್ವೆ ಮಾರ್ಗವು ತಾಲೂಕಿನ ಗಡಿಗ್ರಾಮವಾದ ಸಿಂಗನಹಳ್ಳಿಯ ಪಕ್ಕದಲ್ಲಿಯೇ ಹಾದು ಹೋಗಿದ್ದು ಕೆ.ಆರ್.ಪೇಟೆ ತಾಲೂಕಿನಿಂದ ಮೈಸೂರು ಜಿಲ್ಲೆಯ ಭೇರ್ಯಕ್ಕೆ ಹೋಗಬೇಕಾದರೆ ರೈಲ್ವೆ ಗೇಟನ್ನು ಸಾಗಿ ಮುಂದೆ ಸಾಗಬೇಕಾಗಿದೆ. ರೈಲ್ವೆ ಗೇಟನ್ನು ಹಾಕುವುದರಿಂದ ಪ್ರಯಾಣಿಕರು ರೈಲು ಗಾಡಿಯು ಹೋಗುವವರೆಗೆ ಹತ್ತರಿಂದ ಹದಿನೈದು ನಿಮಿಷ ಕಾದು ಗೇಟು ತೆಗೆದ ನಂತರ ಮುಂದೆ ಸಾಗುವುದು ಅನಿವಾರ್ಯವಾಗಿದೆ. ಈ ರೈಲ್ವೆ ಗೇಟಿನ ಸಮಸ್ಯೆಯು ಕಳೆದ ೦೪ ದಶಕಗಳಿಂದಲೂ ಈ ಭಾಗದ ಪ್ರಯಾಣಿಕರನ್ನು ಕಾಡುತ್ತಿದ್ದು ಕೆಶಿಫ್ ಭವ್ಯವಾದ ಮೇಲ್ಸೆತುವೆಯು ನಿರ್ಮಾಣವಾಗುತ್ತಿರುವುದರಿಂದ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಕೆ.ಆರ್.ಪೇಟೆ ತಾಲೂಕನ್ನು ದಾಟಿಕೊಂಡು ಮೈಸೂರು ಜಿಲ್ಲೆಯ ಸೋಮನಾಥಪುರ ಮಾರ್ಗವಾಗಿ ಜಲಸೂರಿಗೆ ಸಂಪರ್ಕ ನೀಡುವ ರಾಜ್ಯ ಹೆದ್ದಾರಿಯ ಕಾಮಗಾರಿಯು ಭರದಿಂದ ನಡೆಯುತ್ತಿದೆ.
ಒಂದೂವರೆ ಕಿಲೋಮೀಟರ್ಗೂ ಹೆಚ್ಚು ಉದ್ಧವಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯ ಮೇಲ್ಸೆತುವೆ ಕಾಮಗಾರಿಯು ಮೈಸೂರು-ಹಾಸನ ರೈಲ್ವೆ ಹಳಿಯ ಮೇಲೆ ದಾಟಿಹೋಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದಿMದ ಕೆಶಿಪ್ ನೇತೃತ್ವದಲ್ಲಿ ಕೆಎನ್ಆರ್ಸಿಎಲ್ ಗುತ್ತಿಗೆ ಕಂಪನಿಯು ಈ ಮೇಲ್ಸೆತುವೆಯನ್ನು ನಿರ್ಮಿಸುತ್ತಿದೆ. ರಾಜ್ಯ ಹೆದ್ದಾರಿಯ ಈ ಮಹತ್ವಾಕಾಂಕ್ಷಿ ಕಾಮಗಾರಿಯು ಸಂಪೂರ್ಣಗೊAಡು ವಾಹನಗಳ ಸಂಚಾರಕ್ಕೆ ಮೇಲ್ಸೆತುವೆಯು ಮುಕ್ತವಾಗುತ್ತಿದ್ದಂತೆಯೇ ೪೦ ವರ್ಷಗಳ ಈ ಭಾಗದ ಸಮಸ್ಯೆಗೆ ಶಾಶ್ವತವಾದ ಪರಿಹಾರವು ದೊರಕಲಿದೆ. ಹಗಲಿರುಳೆನ್ನದೇ ರಾಜ್ಯ ಹೆದ್ದಾರಿಯ ಕಾಮಗಾರಿಯು ನಡೆಯುತ್ತಿರುವುದು ಒಂದು ಕಡೆ ಸಂತೋಷವಾದರೆ 40 ವರ್ಷಗಳ ರೈಲ್ವೆ ಗೇಟಿನ ಸಮಸ್ಯೆಗೆ ಶಾಶ್ವತ ಪರಿಹಾರವು ದೊರಕುತ್ತಿರುವುದು ಮತ್ತೊಂದು ಸಂತೋಷಕ್ಕೆ ಕಾರಣವಾಗಿದೆ. ಮಡಿಕೇರಿಯಿಂದ ಕೊಣನೂರು, ಸೋಮನಾಥಪುರ, ಸಾಲಿಗ್ರಾಮ, ಕೆ.ಆರ್.ಪೇಟೆ, ನಾಗಮಂಗಲ, ಹುಲಿಯೂರುದುರ್ಗ ಮಾಗಡಿ ಮಾರ್ಗವಾಗಿ ನೇರವಾಗಿ ಬೆಂಗಳುರಿಗೆ ಸಂಪರ್ಕ ನೀಡುವ ಅತ್ಯಾಧುನಿಕ ರಾಜ್ಯ ಹೆದ್ದಾರಿಯ ಕಾಮಗಾರಿಯು ನೇರವಾಗಿ ರಾಜ್ಯದ ರಾಜಧಾನಿಗೆ ಸಂಪರ್ಕ ನೀಡುವುದಲ್ಲದೇ ಮಡಿಕೇರಿ ಬೆಂಗಳೂರಿನ ನಡುವಿನ ಅಂತರವನ್ನೂ ಕಡಿಮೆ ಮಾಡುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ