ಕೆ.ಆರ್.ಪೇಟೆ: ಜಲಜೀವನ್ ಮಿಷನ್ ಯೋಜನೆಯಿಂದ ಪ್ರತಿಯೊಂದು ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಅವರು ಕೆ.ಆರ್. ಪೇಟೆ ತಾಲ್ಲೂಕಿನ ಶ್ಯಾರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ನಾವೆಲ್ಲರೂ ಬಾವಿ, ಕಟ್ಟೆ ನದಿ, ಕಾಲುವೆಗಳ ನೀರನ್ನೆ ಕುಡಿಯಲು ಬಳಸುತ್ತಿದ್ದೆವು, ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಖಾನೆಗಳು ಕಲುಷಿತವಾದ ನೀರನ್ನು ನೀರಿನ ಮೂಲಗಳಾದ, ನದಿ, ಕೆರೆ ಕಟ್ಟೆಗಳನ್ನು ಸೇರುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ. ಈ ನೀರನ್ನು ಸೇವಿಸಿದರೆ ಆರೋಗ್ಯ ಕೆಡುವುದರಿಂದ ನಮಗೆ ಶುದ್ದ ಜಲದ ಅವಶ್ಯಕತೆ ಇದೆ ಎಂದರು.
ಇದಕ್ಕಾಗಿ ಜಲಜೀವನ್ ಮಿಷನ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ. ಇದರ ಗುತ್ತಿಗೆದಾರರು ಎಲ್.ಅಂಡ್ ಟಿ ಸಂಸ್ಥೆ ವಹಿಸಿಕೊಂಡಿದೆ. ಗುಣಮಟ್ಟದ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಕೊಡುವ ಮೂಲಕ ಶುದ್ದ ಕುಡಿಯುವ ನೀರನ್ನು ಜನತೆಗೆ ಪೂರೈಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ಮನವಿ ಮಾಡಿದರು.
ಮಾಜಿ,ತಾಲ್ಲೋಕು ಪಂಚಾಯತಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಎಂಬ ಮನೆಮನೆಗೆ ಗಂಗೆ ಎಂಬ ಶುಧ್ಧ ಕುಡಿಯುವ ನೀರಿನ ಯೋಜನೆ ನಮಗೆ ಅನುಕೂಲವಾಗಲಿದೆ. ಇದನ್ನು ಪ್ರಥಮ ಬಾರಿಗೆ ಶ್ಯಾರಹಳ್ಳಿ ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಭೂಮಿಪೂಜೆ ನಡೆಸುವ ಈ ಭಾಗದ ಜನರು ಶಾಸಕರ ಮೇಲೆ ಇಟ್ಡಿರುವ ವಿಶ್ವಾಸವನ್ನು ಉಳಿಸಿಕೊಂಡು ನುಡಿದಂತೆ ನಡೆದಿದ್ದಾರೆ ಎಂದರು.
ಗ್ರಾ,ಪಂ ಅಧ್ಯಕ್ಷರಾದ ಹೇಮಾಕ್ಷಮ್ಮ ಹೊನ್ನೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯ ಸದುಪಯೋಗ ಎಲ್ಲರಿಗೂ ಶೀಘ್ರದಲ್ಲೇ ಸಿಗಲಿ ಉತ್ತಮವಾದ ಕೆಲಸ ನೆಡೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಘಟಕ ಅಧ್ಯಕ್ಷ ರವಿಕುಮಾರ್, ಗ್ರಾ,ಪಂ ಉಪಾಧ್ಯಕ್ಷ ಕೆ,ಕೆ ನಂಜೇಗೌಡ, ಸದಸ್ಯರಾದ ಶ್ಯಾರಹಳ್ಳಿ, ಮೀನಾಕ್ಷಿ ಪುರುಷೋತ್ತಮ್,ಹೇಮಾನವೀನ್, ಎಸ್.ಜೆ.ಬಸವರಾಜು, ಸಾರಂಗಿ ರಮೇಶ್, ಸೌಭಾಗ್ಯ ಕುಮಾರಸ್ವಾಮಿ, ಮಮತ, ಗೌಡ ಆನಂದ್ ಕೆಂಪ, ಜಾಗಿನಕೆರೆ ಕಿಟ್ಟಿ, ಸಣ್ಣತಾಯಮ್ಮ, ಕೊಟಗಹಳ್ಳಿ ಮಂಜೇಗೌಡ, ಮಹಾದೇವಿ, ರಾಜು, ಸುಲೋಚನರವಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್.ಯೋಗೇಶ್, ಕಾರ್ಯದರ್ಶಿ ಪಾಪೇಗೌಡ, ಬಿಲ್ ಕಲೆಕ್ಟರ್ ಶಂಕರ್, ಶಿವಲಿಂಗೇಗೌಡ, ಗ್ರಾಮದ ಮುಖಂಡರಾದ ಕೃಷ್ಣ ಮೂರ್ತಿ, ನರಸೇಗೌಡ, ಕಲ್ಮನೆ ಮಂಜೇಗೌಡ, ಕ್ರೈನ್ ನಂಜೇಗೌಡ, ರಂಗಸ್ವಾಮಿ, ಅಂಗಡಿ ಆನಂದ್, ದೇವರಾಜೇಗೌಡ, ಹೊನ್ನೇಗೌಡ, ಪುರುಷೋತ್ತಮ್, ನವೀನ್, ಗಣೇಶಗೌಡ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ