ಪೆರಾಜೆ: ಶ್ರೀ ರಾಮಚಂದ್ರಾಪುರ ಪೆರಾಜೆ ಮಾಣಿ ಮಠದಲ್ಲಿ ಶ್ರೀ ಗುರುಗಳಿಂದ ಪ್ರತಿದಿನ ಸ್ವರ್ಣ ಮಂಟಪದಲ್ಲಿ ಪೂಜೆಯಾಗುವ ಶ್ರೀ ಕರಾರ್ಚಿತ ದೇವರ ಆಗಮನವಾಯಿತು. ಮಠದ ಪ್ರಮುಖರಾದ ಹಾರಕೆರೆ ನಾರಾಯಣ ಭಟ್ ಮೊದಲಾದವರು ಸ್ವಾಗತಿಸಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನವರಾತ್ರಿ ನಮಸ್ಯಾ ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀ ರಾಜರಾಜೇಶ್ವರಿ ಯ ಮಹಾಸಮಾರಾಧನೆ ಶ್ರೀ ರಾಮಚಂದ್ರಾಪುರ ಮಠ ಪೆರಾಜೆ ಮಾಣಿಯಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಸ್ವರ್ಣ ಮಂಟಪದಲ್ಲಿ ಶ್ರೀ ಪೂಜೆ, ಸ್ವರ್ಣ ಪಾದುಕಾ ಪೂಜೆ, ಸ್ವರ್ಣ ಭಿಕ್ಷಾ ಸೇವೆ ನಡೆಯಲಿದೆ.
ಪ್ರತಿದಿನ ಅಪರಾಹ್ನ 3.15ರಿಂದ ಶ್ರೀ ಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ ಎಂದು ಶ್ರೀ ಮಠದ ಅಧ್ಯಕ್ಷರು ತಿಳಿಸಿದ್ದಾರೆ. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠಕ್ಕೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಶುಕ್ರವಾರ ಸಂಜೆ ಆಗಮಿಸಿದರು. ಮಠದ ವತಿಯಿಂದ ಗೌರವಪೂರ್ಣ ಸ್ವಾಗತ ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ