ಮಂಗಳೂರು: ಅತ್ಯಪೂರ್ವ ಪ್ರೀತಿಯನ್ನು ಸಂಭ್ರಮಿಸಲು ಪ್ಲಾಟಿನಂ ಲವ್ ಬ್ಯಾಂಡ್ಸ್ ಹೊಸ ಸಂಗ್ರಹ ಬಿಡುಗಡೆ ಮಾಡಿದೆ. ಈ ವಿಶಿಷ್ಟ ಸಂಗ್ರಹವನ್ನು ನಯವಾಗಿ ವಿನ್ಯಾಸಗೊಳಿಸಲಾಗಿದ್ದು ಆಕರ್ಷಕ ವಿಧಗಳು, ವಿಶಿಷ್ಟ ರಚನೆಗಳು, ಸುಲಲಿತ ಗೆರೆಗಳು ಮತ್ತು ಸೊಗಸಾದ ಅಲಂಕರಣಗಳನ್ನು ಹೊಂದಿದೆ.
ಪ್ಲಾಟಿನಂ ಲವ್ ಬ್ಯಾಂಡ್ಸ್ ಶೇ.95ರಷ್ಟು ಶುದ್ಧ ಮತ್ತು ಅಪರೂಪದ ಪ್ಲಾಟಿನಂ ಹೊಂದಿದ್ದು ಅವು ಪ್ರೀತಿಯ ಅತ್ಯುತ್ತಮ ಸಂಕೇತವಾಗಿವೆ. ಅವು ಪರಸ್ಪರರ ವೈಯಕ್ತಿಕತೆಯನ್ನು ಗೌರವಿಸುವ ಆಧುನಿಕ ಮೌಲ್ಯಗಳ ಮೇಲೆ ನಿರ್ಮಾಣವಾಗಿದ್ದು ಪರಸ್ಪರರ ಗೆಲುವುಗಳನ್ನು ಆನಂದಿಸುವ ಮತ್ತು ಸಮಾನವಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳುವ, ಸಾಂಪ್ರದಾಯಿಕ ಪಾತ್ರಗಳು ಮತ್ತು ಲಿಂಗದ ನಿರೀಕ್ಷೆಗಳನ್ನು ಮೀರುತ್ತದೆ ಎಂದು ಪ್ರಕಟಣೆ ಹೇಳಿದೆ.
ಈ ಸಂಗ್ರಹದ ಪ್ರತಿ ಲವ್ ಬ್ಯಾಂಡ್ ಕೂಡಾ ಮಾಸ್ಟರ್ ಪೀಸ್ ಆಗಿದ್ದು ಆಳವಾದ ಸಂಪರ್ಕ ಮತ್ತು ಪೂರ್ಣ ಹೃದಯದ ಅನುಮೋದನೆಯ ಮುರಿಯದ ವೃತ್ತವನ್ನು ಸಂಕೇತಿಸುತ್ತವೆ. ಪಿಜಿಐ ಇಂಡಿಯಾದಿಂದ ಪ್ಲಾಟಿನಂ ಡೇಸ್ ಆಫ್ ಲವ್ ವಿಶೇಷವಾಗಿ ರೂಪಿಸಿದ ಪ್ಲಾಟಿನಂ ಲವ್ ಬ್ಯಾಂಡ್ ಗಳ ವಿಶೇಷವಾದ ಆಯ್ಕೆ ಒದಗಿಸುತ್ತಿದ್ದು ಅದು ಭಾರತದಲ್ಲಿ ಪ್ರಮುಖ ಆಭರಣ ರಿಟೇಲ್ ಮಳಿಗೆಗಳಲ್ಲಿ ಲಭ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ