ಮಹಿಳೆಯರು ದೈವಾಂಶ ಸಂಭೂತರು: ಭುವನೇಶ್ವರಿ ಹೆಗಡೆ

Upayuktha
0



ಮಂಗಳೂರು: ಮಹಿಳೆ ಅತ್ಯಂತ ಸಹನಾಮಯಿ ಮತ್ತು ಮಾತೃ ಹೃದಯದವರು. ಪ್ರತಿಯೊಬ್ಬ ಮಹಿಳೆಯೂ ದೇವಿಯ ಸಮಾನರು. ಮಹಿಳೆ ತನ್ನ ಮನೆಕೆಲಸದ ಜೊತೆ ಜೊತೆಗೆ ಸಮಾಜದ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಕ್ಕಳು ಕುಟುಂಬವನ್ನು ನಿಭಾಯಿಸುತ್ತಾ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಕಾಳಜಿಯಿಂದ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಾ ಸಮಾಜ ಸೇವೆಯನ್ನು ಮಾಡುವುದು ಅತ್ಯಂತ ಪ್ರಶಂಸನೀಯ. ನವರಾತ್ರಿಯ ಶುಭ ಸಂದರ್ಭದಲ್ಲಿ ಒಂಭತ್ತು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಒಂಭತ್ತು ಮಹಿಳಾ ಗೃಹರಕ್ಷಕಿಯರನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಅಭಿನಂದನೀಯ. ದಕ್ಷಿಣ ಕನ್ನಡ ಜಿಲ್ಲೆ, ಗೃಹರಕ್ಷಕದಳ ಡಾ|| ಮುರಲೀಮೋಹನ್ ಚೂಂತಾರುರವರ ನೇತೃತ್ವದಲ್ಲಿ ಬಹಳ ಕ್ರಿಯಾಶೀಲವಾಗಿ  ಕೆಲಸ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಎಲ್ಲಿ ಮಹಿಳೆಯರನ್ನು ಗುರುತಿಸಿ, ಗೌರವಿಸಿ, ಅಭಿನಂದಿಸುತ್ತಿರೋ ಅಲ್ಲಿ ಸ್ವತ: ದೇವಿಯೇ ಬಂದು ನೆಲೆಸುತ್ತಾಳೆ ಮತ್ತು ಹರಸುತ್ತಾರೆ. ಇಂತಹ ಪುಣ್ಯದ  ಕೆಲಸ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ  ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ ಎಂದು  ಖ್ಯಾತ ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.



ಅವರು ಬುಧವಾರದಂದು ನಗರದ ಮೇರಿಹಿಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಮಾತನಾಡಿದರು ನವರಾತ್ರಿಯ ಶುಭ ಸಂದರ್ಭದಲ್ಲಿ 9 ವಿವಿಧ ಇಲಾಖೆಗಳಾದ ಸಾರಿಗೆ, ಎನ್‍ಸಿಸಿ, ವಿಧಿ ವಿಜ್ಞಾನ ಕಾರಾಗೃಹ, ಪೊಲೀಸ್ ಇಲಾಖೆ, ಅಗ್ನಿಶಾಮಕ, ದೇವಸ್ಥಾನ, ಕೆಎಸ್‍ಆರ್‍ಟಿಸಿ, ರೈಲ್ವೇ ಪೊಲೀಸ್ ಇಲಾಖೆ ಕೆಲಸ ಮಾಡಿದ  ಒಂಭತ್ತು ಮಹಿಳಾ ಗೃಹರಕ್ಷಕಿಯರಿಗೆ  ಸನ್ಮಾನ ಕಾರ್ಯಕ್ರಮಮ ಜರುಗಿತು. 



ಭುವನೇಶ್ವರಿ ಹೆಗಡೆ ಎಲ್ಲರಿಗೂ ಶಾಲು ಹೊದಿಸಿ, ಪೇಟ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ದ.ಕ. ಜಿಲ್ಲಾ ಗೃಹರಕ್ಷಕ ದಳ  ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಮತ್ತು ಲಯನ್ಸ್  ಕ್ಲಬ್ ಮಂಗಳೂರು ಲಿಯೋ ಕ್ಲಬ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜರುಗಿತು.




ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲಯನ್ ಶೀನ ಪೂಜಾರಿ  ಅವರು  ಮಾತನಾಡಿ ಸನ್ಮಾನದಿಂದ  ಗೌರವ ಸಿಗುವುದರ ಜೊತೆಗೆ  ಜವಾಬ್ದಾರಿ  ಹೆಚ್ಚಿದೆ. ಮತ್ತಷ್ಟು  ಹುರುಪು ಹಾಗೂ  ಹುಮ್ಮಸ್ಸಿನಿಂದ ಕೆಲಸ ಮಾಡಿ  ಸಮಾಜದ ಋಣ ತೀರಿಸಿ  ಎಂದು  ಗೃಹರಕ್ಷಕಿಯರು ಹಾರೈಸಿದರು.  



ಅಧ್ಯಕ್ಷೀಯ  ಭಾಷಣ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಅವರು ಮಾತನಾಡಿ ಮಹಿಳೆ ಗೃಹರಕ್ಷಕಿಯಾಗಿ ಕೆಲಸ ಮಾಡುವುದರ ಜೊತೆಗೆ ಮನೆ ಕೆಲಸ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಆಕೆ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ ಹತ್ತು ಹಲವು ರೂಪಗಳಲ್ಲಿ ಪುರುಷನಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಾಳೆ. ಅವರ ಸೇವೆ ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ ಎಂದು ಡಾ|| ಚೂಂತಾರು ಮಾಡಿದರು. ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹರಕ್ಷಕಿಯರನ್ನು ಗುರುತಿಸಿ ಗೌರವಿಸಿ ಮುನ್ನೆಲೆಗೆ ತರುವ  ಕೆಲಸ ಸಮಾಜ ಮಾಡಬೇಕು ಎಂದು ಕರೆ ನೀಡಿದರು.



ಈ ಸಂದರ್ಭದಲ್ಲಿ ಒಂಭತ್ತು  ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಒಂಭತ್ತು ಗೃಹರಕ್ಷಕಿಯರಾದ ನಳಿನಿ, ಸುಕನ್ಯಾ,  ನಳಿನಾಕ್ಷಿ,  ಶೋಭ,  ಬೇಬಿ, ತಾರಾ,  ಬಬಿತಾ,  ಮಂಜುಳ,  ಜಯಂತಿ,  ಇವರುಗಳಿಗೆ ಸನ್ಮಾನ ಮಾಡಲಾಯಿತು.



ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರುಗಳಾದ  ಜಯರಾಜ್ ಪ್ರಕಾಶ್ ಮತ್ತು  ಹೇಮ ರಾವ್, ಖಜಾಂಚಿ  ಶಿವರಾಮ್ ರೈ, ಜೊತೆ ಕಾರ್ಯದರ್ಶಿ ದಿನಕರ್ ಕೋಟ್ಯಾನ್, ಜೊತೆ ಖಜಾಂಚಿ  ನಾರಾಯಣ  ಕೋಟ್ಯಾನ್ ಹಾಗೂ ಲಯನ್ ಸದಸ್ಯರಾದ ರಿಚಾರ್ಡ್ ಲೋಬೋ  ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಗೃಹರಕ್ಷಕರಾದ ದಿವಾಕರ, ಸಂದೇಶ್ ಕುಮಾರ್, ಸುಲೋಚನಾ, ಶೈಲಜಾ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top