ಉಜಿರೆ: 2021-22ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ರಾಜ್ಯ ಪ್ರಶಸ್ತಿಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ Iರ ಹಿರಿಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್ ಅವರಿಗೆ ದೊರೆತಿದೆ.
ಉಜಿರೆಯ ಎಸ್‌ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಲಕ್ಷ್ಮೀನಾರಾಯಣ ಕೆ.ಎಸ್ ಅವರು, ಜೂನ್ 2019ರಲ್ಲಿ ಯೋಜನಾಧಿಕಾರಿಯಾಗಿ ನೇಮಕಗೊಂಡು ಜೂನ್ 2023 ರವರೆಗೆ ಯೋಜನಾಧಿಕಾರಿಯಾಗಿ ಘಟಕ 1 ನ್ನು ಮುನ್ನಡೆಸಿದ್ದಾರೆ.
ಮೂರು ವಾರ್ಷಿಕ ವಿಶೇಷ ಶಿಬಿರಗಳ ಆಯೋಜನೆ, ಕೊರೊನ ಕಾಲದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಜಾಗೃತಿ, ಲಾಕ್ ಡೌನ್ ವಿಶೇಷ ಕಾರ್ಯಕ್ರಮಗಳು, ಕೋವಿಡ್ ಲಸಿಕಾ ಜಾಗೃತಿ ಹಾಗೂ ಲಸಿಕಾ ಶಿಬಿರಗಳ ಆಯೋಜನೆ, ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸ್ವಯಂಸೇವಕರೇ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವತಂತ್ರ ಭಾರತದ ಸಾಧಕರು ಹಾಗೂ ಸ್ವತಂತ್ರ ಹೋರಾಟಗಾರ ಕುರಿತಾಗಿ 75 ವಿಶೇಷ ಉಪನ್ಯಾಸಗಳ ಸರಣಿ ಆಯೋಜನೆ, ಇಂಗು ಗುಂಡಿಗಳ ನಿರ್ಮಾಣ, ಸ್ವಚ್ಛ ಭಾರತ ಕಾರ್ಯಕ್ರಮಗಳ ಆಯೋಜನೆ, ಪರಿಸರ ಸಂಬಂಧಿ ಹಾಗೂ ಜಲ ಸಂರಕ್ಷಣೆಗೆ ಕುರಿತಾದ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿ ಹಲವು ಕಾರ್ಯಕ್ರಮಗಳನ್ನು ತಮ್ಮ ಅವಧಿಯಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದಾರೆ.
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಶಿಬಿರಗಳಲ್ಲಿ, ಯುವಜನೋತ್ಸವಗಳಲ್ಲಿ, ನಾಯಕತ್ವ ತರಬೇತಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರ ಪಾಲ್ಗೊಳ್ಳುವಿಕೆ ಅವರ ಅವಧಿಯಲ್ಲಿ ಆಗಿರುತ್ತದೆ.
ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಸಂಸ್ಥೆಯ ಆಡಳಿತ ಮಂಡಳಿಯ ಬೆಂಬಲ, ಕಾರ್ಯದರ್ಶಿಗಳು, ಪ್ರಾಂಶುಪಾಲರುಗಳು, ಹಿರಿಯ ಯೋಜನಾಧಿಕಾರಿಗಳು, ಹಿರಿಯ ಸ್ವಯಂಸೇವಕರು, ಈಗಿನ ಸ್ವಯಂಸೇವಕರು, ಅನೇಕ ಸಂಘ ಸಂಸ್ಥೆಗಳ ಮುಖಂಡರು, ಹಿರಿಯರು, ಊರವರ ಸಹಕಾರ ಈ ಸಾಧನೆಗೆ ಮೂಲ ಕಾರಣ ಎಂಬುದು ನನ್ನ ಭಾವನೆ. ನಮ್ಮ ಕಾಲೇಜಿನ ಘಟಕಕ್ಕೆ ಪ್ರಶಸ್ತಿ ಬಂದದ್ದು ವೈಯಕ್ತಿಕ ಪ್ರಶಸ್ತಿಗಿಂತಲೂ ಕೂಡ ನನಗೆ ಬಹಳ ಸಂತೋಷವನ್ನು ನೀಡಿದೆ.
- ಡಾ. ಲಕ್ಷ್ಮೀನಾರಾಯಣ ಕೆ.ಎಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ