ಮಂಗಳೂರು: ದಸರಾ ಹಬ್ಬದ ಅಂಗವಾಗಿ ನಗರದ ನೆಕ್ಸಸ್ ಮಾಲ್‍ನ ಫಿಝಾ ಮಂಗಳೂರಿನ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ಉಡುಗೆಗಳಲ್ಲಿ ಮಿಂದೇಳುವಂತೆ ಮಾಡುವ ವಿಶಿಷ್ಟ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ.
ಒಂಬತ್ತು ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 9ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 15ರಂದು ಚೆಂಡೆ-ವಯೋಲಿನ್ ಫ್ಯೂಝನ್ ಶೋ, 16ರಂದು ಯಕ್ಷಗಾನ ಗೊಂಬೆಯಾಟ, 17ರಂದು ಮಕ್ಕಳ ಯಕ್ಷಗಾನ, 18ರಂದು ದೇವದಾಸ್ ಕಾಪಿಕಾಡ್ & ತಂಡದಿಂದ ತುಳು ಹಾಸ್ಯ ನಾಟಕ, 19ರಂದು ಕಂಬಳ ವೈಭವ, 20ಂದು ನವರಾತ್ರಿ ದಾಂಡಿಯಾ ಧೂಂ, 21ರಂದು ಕಿಂಗ್ & ಕ್ವೀನ್ ಆಫ್ ಮಂಗಳೂರು: ಸಾಂಪ್ರದಾಯಿಕ ಫ್ಯಾಶನ್ ಪ್ರದರ್ಶನ, 22ರಂದು ಟಗ್ ಆಫ್ ವಾರ್ ಸ್ಪರ್ಧೆ, 23ರಂದು ಹುಲಿ ಕುಣಿತ ಶಾಪಿಂಗ್ ಉತ್ಸಾಹಿಗಳಿಗೆ ವಿಶೇಷ ಮುದ ನೀಡಲಿದೆ.
ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸ್ಫೂರ್ತಿ ಪಡೆಯುವ ಕಾರ್ಯಕ್ರಮಗಳ ಸರಣಿ ಆಯೋಜಿಸಲಾಗಿದ್ದು, ಮಂಗಳೂರಿನ ಶ್ರೀಮಂತ ಜಾನಪದ ಇತಿಹಾಸಕ್ಕೆ ಗೌರವ ಸಲ್ಲಿಸುವ ಮತ್ತು ಮರೆಯಲಾಗದಂತಹ ಅನುಭವವಗಳನ್ನು ನೀಡುವ ಉದ್ದೇಶದಿಂದ ವಿಶೇಷವಾಗಿ ಅಲಂಕರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ