ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲು ಐಫೈನಾನ್ಸ್ ಸೌಲಭ್ಯ

Upayuktha
0


ಮಂಗಳೂರು: ಕೋಟ್ಯಂತರ ಗ್ರಾಹಕರು, ರಿಟೇಲ್ ವಹಿವಾಟುದಾರರು  ಮತ್ತು ಏಕಮಾತ್ರ ಮಾಲೀಕರಿಗೆ ತಮ್ಮ ಉಳಿತಾಯ ಮತ್ತು ಚಾಲ್ತಿ ಖಾತೆಗಳ ಕ್ರೋಡೀಕೃತ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುವು ಮಾಡಿಕೊಡುವ 'ಐಫೈನಾನ್ಸ್' ಸೌಲಭ್ಯವನ್ನು ಐಸಿಐಸಿಐ ಬ್ಯಾಂಕ್ ಪ್ರಕಟಿಸಿದೆ.


ಐಸಿಐಸಿಐ ಬ್ಯಾಂಕ್‍ನ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಾದ ಐಮೊಬೈಲ್‍ಪೇ ಅಪ್ಲಿಕೇಷನ್, ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್, ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ವಹಿವಾಟಿಗಾಗಿ ಇರುವ ಬ್ಯಾಂಕ್‍ನ ಮೊಬೈಲ್ ಆ್ಯಪ್ ಇನ್‍ಸ್ಟಾಬಿಜ್‍ನಲ್ಲಿ ಇತರ ಬ್ಯಾಂಕ್‍ಗಳ ಗ್ರಾಹಕರು ಕೂಡಾ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಐಸಿಐಸಿಐ ಬ್ಯಾಂಕ್‍ನ ಡಿಜಿಟಲ್ ಚಾನೆಲ್‍ಗಳ ಮುಖ್ಯಸ್ಥ  ಸಿದ್ಧರಥ ಮಿಶ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿಯನ್ನು  ಒಂದೆಡೆಯೇ -ವೀಕ್ಷಿಸಬಹುದಾದ ಸೌಲಭ್ಯವನ್ನು (ಡ್ಯಾಷ್‍ಬೋರ್ಡ್) 'ಐಫೈನಾನ್ಸ್'  ಒದಗಿಸುತ್ತದೆ. ಈ ಡ್ಯಾಷ್‍ಬೋರ್ಡ್‍ನಲ್ಲಿ  ಬಳಕೆದಾರರು ತಮ್ಮ ಖಾತೆಯ ಬ್ಯಾಲನ್ಸ್‍ಗಳನ್ನು ಪರಿಶೀಲಿಸಬಹುದು, ಖರ್ಚು ಮಾದರಿಗಳ ಕುರಿತು ಉಪಯುಕ್ತ ಒಳನೋಟಗಳನ್ನು ಪಡೆಯಬಹುದು, ಬ್ಯಾಂಕಿಂಗ್ ವಹಿವಾಟಿನ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದೂ ಸೇರಿದಂತೆ ವಿವಿಧ ಮಾಹಿತಿಗಳನ್ನು  ಪಡೆದುಕೊಳ್ಳಬದಾಗಿದೆ.


ವೆಚ್ಚಗಳ ಮೇಲೆ ಉತ್ತಮ ನಿಯಂತ್ರಣ ಸಾಧಿಸಲು ಮತ್ತು ಅವರ ಹಣಕಾಸು ವಹಿವಾಟುಗಳನ್ನು ಅಡೆತಡೆರಹಿತ ರೀತಿಯಲ್ಲಿ ಮೇಲ್ವಿಚಾರಣೆ ಮಾಡಲು ಗ್ರಾಹಕರಿಗೆ ಸಹಾಯ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top