ಆಲ್‍ ಇಂಡಿಯಾ ತಲ್ ಸೈನಿಕ್‍ ಕ್ಯಾಂಪ್ ನಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ಎನ್‌ಸಿಸಿ ಕೆಡೆಟ್

Upayuktha
0


ಪುತ್ತೂರು: ವಿದ್ಯಾರ್ಥಿಗಳು ಪಠ್ಯದಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಸಾಧನೆಗೆ ಮುಖ್ಯವಾಗಿರುತ್ತದೆ. ಕಠಿಣ ಪರಿಶ್ರಮ  ಮತ್ತು ನಿರಂತರ ಅಭ್ಯಾಸದಿಂದ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಹಾಗೆ ನಮ್ಮ ಕಾಲೇಜಿನ ಎನ್‍ಸಿಸಿ ಘಟಕ ಹಲವು ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಯನ್ನು ಮಾಡಿ ಕಾಲೇಜಿಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾರೆ. ಅವರ ಸಾಲಿಗೆ ಇಂದುಜೂನಿಯರ್‍ ಅಂಡರ್‍ ಆಫೀಸರ್ (ಜೆಯುಓ) ಅನ್ವಿತಾಗೋಪಾಲ್.ಎ. ಸೇರಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು,ಇಲ್ಲಿಎನ್ ಸಿ ಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಆಲ್‍ ಇಂಡಿಯಾತಲ್ ಸೈನಿಕ್‍ ಕ್ಯಾಂಪ್ ನಲ್ಲಿ ಭಾಗವಹಿಸಿದ ಕಾಲೇಜಿನಎನ್ ಸಿ ಸಿ ಘಟಕದ ಜೂನಿಯರ್‍ ಅಂಡರ್ ಆಫೀಸರ್ (ಜೆಯು ಓ) ಅನ್ವಿತಾಗೋಪಾಲ್.ಎ. ಇವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಲೇಜಿನ ಎನ್ ಸಿ ಸಿ ಘಟಕದ ಮುಖ್ಯಸ್ಥ ಲೆ. ಭಾಮಿ ಅತುಲ್ ಶಣೈ ಮಾತನಾಡಿ ಆಲ್‍ಇಂಡಿಯಾತಲ್ ಸೈನಿಕ್‍ಕ್ಯಾಂಪ್ ನಲ್ಲಿ ಭಾಗವಹಿಸುವುದು ಸುಲಭದ ಮಾತಲ್ಲ ಅದಕ್ಕಾಗಿ ತಯಾರಿ ಮತ್ತು ಕಠಿಣ ಪರಿಶ್ರಮದ ಮತ್ತುದೃಢ ಮನಸ್ಥಿತಿಯ ಅಗತ್ಯ ಇದೆ ಮತ್ತು ಎಲ್ಲವನ್ನು ಎದುರಿಸುವ ಶಕ್ತಿ ಆ ವಿದ್ಯಾರ್ಥಿಗಳಲ್ಲಿರಬೇಕು.ಆಗ ಮಾತ್ರ ಇಂತಹ ಕ್ಯಾಂಪ್‌ನಲ್ಲಿ ಭಾಗವಹಿಸಲು ಸಾಧ್ಯ ಎಂದು ಹೇಳಿದರು.


ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅನ್ವಿತಗೋಪಾಲ್ ಎ ಜೂನ್ 20ರಂದು ಪ್ರಾರಂಭವಾದ ಪ್ರೆಕಲ್ ಸೈನಿಕ್‍ಕ್ಯಾಂಪ್ ಮತ್ತು ಪ್ರೆತಲ್ ಸೈನಿಕ ಕ್ಯಾಂಪ್ 2 ಮಡಂತ್ಯಾರುನಲ್ಲಿ ಏರ್ಪಟ್ಟಿತ್ತು. ಇಂಟರ್‍ ಗ್ರೂಪ್‍ ಕಾಂಪಿಟೇಶನ್( ಐಜಿಸಿ) ಶಿವಮೊಗ್ಗದಲ್ಲಿ ನಡೆಯಿತು. ನಂತರ ಇಂಟರ್‍ ಗ್ರೂಪ್‍ ಕಾಂಪಿಟೇಶನ್ ಐಜಿಸಿ ಒನ್, ಐಜಿಸಿ ಟು, ಐಜಿಸಿ 3 ಮತ್ತು ಕಿಟ್ಟಿಂಗ್‍ ಕ್ಯಾಂಪ್ ಮೈಸೂರಿನಲ್ಲಿ ನಡೆದವು. ಪ್ರತಿಯೊಂದು ಕ್ಯಾಂಪ್‌ನಲ್ಲಿ ವಿವಿಧ ಅನುಭವ ನೀಡಿತು.  ನಾವು ಒಂದು ದಾರಿಯಲ್ಲಿ  ಸಾಧನೆ ಮಾಡಲು ಹೊರಟಾಗ ಅನೇಕ ಏರುಪೇರುಗಳು ನಮ್ಮನ್ನು ವಿಚಲಿತಗೊಳಿಸುತ್ತವೆ. ಆದರೆ ಅದರಿಂದ ಹೊರಬಂದು ನಾನು ಕ್ಯಾಂಪ್ ನಲ್ಲಿ ಭಾಗವಹಿಸಲು ನನಗೆ ಬೆಂಬಲ ನೀಡಿದವರು ನನ್ನ ಪೋಷಕರು ಮತ್ತು ಸಹೋದರಿ. ನಮ್ಮ ಕಾಲೇಜಿನ ಎನ್‍ಸಿಸಿ ಮುಖ್ಯಸ್ಥ ಲೆ. ಬಾಮಿ ಅತುಲ್ ಶಣೈ ಸರ್ ನನಗೆ ಕ್ಯಾಪ್ ನಲ್ಲಿ ಭಾಗವಹಿಸಲು ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ ಮತ್ತು  ಸಹಕಾರವನ್ನು ನೀಡಿದ ಸೀನಿಯರ್ಸ್ ಮತ್ತು ಉಪನ್ಯಾಸಕರಿಗೆ ಧನ್ಯವಾದಗಳು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ ಶ್ರೀಧರ್ ನ್ಯಾಯ್ಕ್ , ಐಕ್ಯೂಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಶಿವಪ್ರಸಾದ್ ಕೆ ಎಸ್, ಭೌತಶಾಸ್ತ್ರ  ವಿಭಾಗದ ಮುಖ್ಯಸ್ಥ ಎನ್ ನರಸಿಂಹ ಭಟ್,ಗಣಕ ವಿಜ್ಞಾನದ ವಿಭಾಗದ ಮುಖ್ಯಸ್ಥ ಪಿ ಪ್ರಕಾಶ್‍ಕುಮಾರ್, ಮತ್ತು ಹೆತ್ತವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕಾಲೇಜಿನ ಎನ್ ಸಿ ಸಿ ಕೆ ಘಟಕದ ಸಾಜೆರ್ಂಟ್‍ ತನುಷ ಸಿ. ಕೆ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top