ಕೆಪಿಸಿಸಿ ಸದಸ್ಯರಾಗಿ ಕಿಕ್ಕೇರಿ ಸುರೇಶ್ ನೇಮಕ: ಕೆ.ಆರ್‌ ಪೇಟೆ ತಾಲೂಕು ಯುವ ಕಾಂಗ್ರೆಸ್‌ಗೆ ಬಲ

Upayuktha
0


ಕೆ. ಆರ್. ಪೇಟೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯರಾಗಿ ಕಿಕ್ಕೇರಿ ಸುರೇಶ್ ನೇಮಕ ಮಾಡಿರುವುದರಿಂದ ತಾಲ್ಲೂಕಿನಲ್ಲಿ ಯುವ ಕಾಂಗ್ರೆಸ್  ಕಾರ್ಯಕರ್ತರಿಗೆ ಹೆಚ್ಚು ಬಲ ಬಂದಂತಾಗಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೇವರಹಳ್ಳಿ ಮಹೇಂದ್ರ ಅವರು ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಕೆಪಿಸಿಸಿ ಸದಸ್ಯರಾಗಿ ಆಯ್ಕೆಗೊಂಡಿರುವ ಕಿಕ್ಕೇರಿ ಸುರೇಶ್ ಅವರನ್ನು  ತಾಲೂಕು ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದಿಸಿ ಮಾತನಾಡಿದ ಅವರು ನಮ್ಮ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ 35 ಕ್ಕೂ ಹೆಚ್ಚು ವರ್ಷಗಳ ಕಾಲ ಸಾಮಾನ್ಯ ಕಾರ್ಯಕರ್ತನಾಗಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ  ಕ್ರಿಯಾಶೀಲತೆಗೆ ಕಾರಣಕರ್ತರಾಗಿದ್ದ ಕಿಕ್ಕೇರಿ ಸುರೇಶ್ ಅವರು ಇಂದು ಕೆಪಿಸಿಸಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಯುವ ಕಾಂಗ್ರೆಸ್ ಬಳಗಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಇವರ ಯುವ ಕಾರ್ಯಕರ್ತರಿಗೆ ಕ್ರಿಯಾಶೀಲತೆ ಸಂಘಟನೆ ಕಾರ್ಯಮತ್ತಷ್ಟು ಸದೃಢಗೊಂಡು ಕಾಂಗ್ರೆಸ್ ಪಕ್ಷವೆಂಬ ಸರ್ವ ಸಮುದಾಯಗಳ ಶಾಂತಿಯ ತೋಟದಲ್ಲಿ ಪ್ರತಿಯೊಂದು ಸಮುದಾಯದ ಕಾರ್ಯಕರ್ತರ ವಿಶ್ವಾಸಗಳಿಸಿ ಮುಂಬರುವ ಚುನಾವಣೆಗಳಲ್ಲಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ ಎಂಬುವ ವಿಶ್ವಾಸವಿದೆ ಎಂದರು. 


ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ನನ್ನ ವಿದ್ಯಾರ್ಥಿ ಜೀವನದಿಂದಲೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಒಪ್ಪಿ ಯಾವುದೇ ಆಮಿಷಕ್ಕೆ ಒಳಗಾಗದೆ ಪಕ್ಷ ನಿಷ್ಠೆಯಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಆತ್ಮತೃಪ್ತಿ ನನಗಿದೆ, ಅದನ್ನು ಪರಿಗಣಿಸಿ ನಮ್ಮ ರಾಷ್ಟ್ರ ಮತ್ತು ರಾಜ್ಯ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಒಂದು ಉನ್ನತ ಜವಾಬ್ದಾರಿ ಸ್ಥಾನವನ್ನು ಹೆಗಲಿಗೆ ನೀಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಪಕ್ಷದ ಸಂಘಟನೆಗೆ ಮತ್ತು ಗೆಲುವಿಗೆ ಹಗಲಿರಲು ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಕೆಹೆಬ್ಬಾಳು ದಿವಾಕರ್, ಪುರಸಭಾ ಸದಸ್ಯರುಗಳಾದ ಕೆ.ಸಿ ಮಂಜುನಾಥ್,ಡಿ.ಪ್ರೇಮ್ ಕುಮಾರ್,ರವೀಂದ್ರ ಬಾಬು, ಕೆ.ಕೆ.ರಮೇಶ್, ಹೊಸಹೊಳಲು ಪ್ರವೀಣ್ ಕುಮಾರ್, ನಿವೃತ್ತ ಪ್ರಾಂಶುಪಾಲ ಜಾಣೇಗೌಡ, ಯೂಥ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್, ದೀಪಕ್, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ಮಹೇಶ್, ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರೇಗೌಡ,ಯುವ ಮುಖಂಡರಾದ ದೇವರಹಳ್ಳಿ ಭರತ್ ಪವನ್, ಶರತ್, ಕೆ ಆರ್ ಪೇಟೆ ಜಬಿವುಲ್ಲಾ, ಹೊಸಹೊಳಲು ಅಜಯ್, ಸಿರಿ, ಕೊಮ್ಮೆನಹಳ್ಳಿ ಅನಿಲ್ ಸೇರಿದಂತೆ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top