ಜಿಹಾದಿ ಭಯೋತ್ಪಾದನೆ ವಿರುದ್ಧ ವಿಶ್ವ ಮಟ್ಟದಲ್ಲಿ ಇಸ್ರೇಲ್ ಬೆನ್ನಿಗೆ ನಿಲ್ಲುವ ಅಗತ್ಯವಿದೆ: ರಮೇಶ ಶಿಂದೆ

Upayuktha
0

 ಇಸ್ರೇಲ್ ಮೇಲೆ 'ಹಮಾಸ್'ದಾಳಿ ಖಂಡನೆ; ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಗೂ ಖಂಡನೆ




ಬೆಂಗಳೂರು: ಇತ್ತೀಚೆಗಷ್ಟೇ ಪ್ಯಾಲೆಸ್ತೀನ್‌ನ ಭಯೋತ್ಪಾದಕ ಸಂಘಟನೆ 'ಹಮಾಸ್' ನ ಭಯೋತ್ಪಾದಕರು ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳಿಂದ ಭೂಮಿ ಮತ್ತು ಸಮುದ್ರದ ಮೂಲಕ ನುಗ್ಗಿ ದಾಳಿ ಮಾಡಿ ನೂರಾರು ಮುಗ್ಧ ಇಸ್ರೇಲಿ ನಾಗರಿಕರನ್ನು ಕೊಂದರು. ಈ ಭಯೋತ್ಪಾದಕ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ಜಿಹಾದಿ ಭಯೋತ್ಪಾದನೆಯ ವಿರುದ್ಧ ವಿಶ್ವ ಮಟ್ಟದಲ್ಲಿ ಇಸ್ರೇಲ್ ಜೊತೆ ನಿಲ್ಲುವ ಅವಶ್ಯಕತೆಯಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮಂಡಿಸಿದರು. 



ಭಾರತದಲ್ಲಿಯೂ ಯಹೂದಿ ಸಹೋದರರು ಶಾಂತಿಯುತವಾಗಿ ಬದುಕುತ್ತಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಯಹೂದಿ ಸಹೋದರರ ಜೊತೆ ಇದೆ, ಎಂದೂ ಸಹ ಶ್ರೀ. ಶಿಂದೆ ಇವರು ಹೇಳಿದ್ದಾರೆ. ಇಂದು ಇಸ್ರೇಲ್‌ನಲ್ಲಿ ದಾಳಿ ನಡೆದಿದೆ, ಈ ಹಿಂದೆ ಕಾಶ್ಮೀರದಲ್ಲೂ ಇಂತಹ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದವು, ಇಂತಹ ದಾಳಿಗಳು ನಾಳೆ ಎಲ್ಲಿಯಾದರೂ ನಡೆಯಬಹುದು. ಜಿಹಾದಿ ಭಯೋತ್ಪಾದನೆಯು ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಇದನ್ನು ವಿಶ್ವ ಮಟ್ಟದಲ್ಲಿ ವಿರೋಧಿಸಬೇಕು. ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ತಕ್ಷಣವೇ ಇಸ್ರೇಲ್ ಮೇಲಿನ ದಾಳಿಯನ್ನು ಖಂಡಿಸಿ ಅದರ ಬೆಂಬಲ ಅಂದರೆ ಜಿಹಾದಿ ಭಯೋತ್ಪಾದನೆಯ ವಿರುದ್ಧ ನಿಲುವು ತೆಗೆದುಕೊಂಡರು. 



ಭಾರತ ಸರಕಾರದ ಈ ನಿಲುವನ್ನು ಹಿಂದೂ ಜನಜಾಗೃತಿ ಸಮಿತಿಯೂ ಬೆಂಬಲಿಸುತ್ತದೆ. ದುರಾದೃಷ್ಟವಶಾತ್ ಕಾಂಗ್ರೆಸ್ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಪ್ಯಾಲೆಸ್ತೀನ್ ಬೆಂಬಲದ ನಿಲುವನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದರು. ಒಂದೆಡೆ, ಪ್ಯಾಲೆಸ್ತೀನ್ ನ ಭೂಮಿ, ಸ್ವ-ಆಡಳಿತ ಮತ್ತು ಸ್ವಾಭಿಮಾನ ಮತ್ತು ಘನತೆಯ ಜೀವನಕ್ಕಾಗಿ ಹಕ್ಕನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಮಂಡಿಸಿತು; ಆದರೆ ಅದೇ ಪ್ಯಾಲೆಸ್ತೀನ್ ನೆಲದಿಂದ ಭಯೋತ್ಪಾದಕ ಸಂಘಟನೆ 'ಹಮಾಸ್' ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಅಮಾಯಕ ನಾಗರಿಕರನ್ನು ಕೊಂದು, ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡಿತು. 



ಈ ಬಗ್ಗೆ ಕಾಂಗ್ರೆಸ್ ಚಕಾರವೆತ್ತಿಲ್ಲ. ಪ್ಯಾಲೆಸ್ತೀನ್‌ಗೆ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕಿದ್ದರೆ, ಇಸ್ರೇಲಿ ಜನರಿಗೆ ಇಲ್ಲವೇ? ಇಸ್ರೇಲ್ ಮೇಲೆ ದಾಳಿಯಾದ ನಂತರವೂ ವಿರೋಧಿಸದೆ ಮತ್ತೊಂದು ಕೆನ್ನೆಯನ್ನು ಕೊಟ್ಟು 'ಗಾಂಧಿಗಿರಿ' ತೋರಿಸುವುದನ್ನು ಕಾಂಗ್ರೆಸ್ ನಿರೀಕ್ಷಿಸುತ್ತದೆಯೇ? ಕಾಂಗ್ರೆಸ್‌ನ ಈ ನಿಲುವು ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಆದ್ದರಿಂದ ಇಸ್ರೇಲ್ ಮೇಲಿನ ದಾಳಿಗೆ 'ಹಮಾಸ್'ಗೆ ಎಷ್ಟು ಖಂಡಿಸುತ್ತೇವೆಯೋ ,ಅಷ್ಟೇ ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುವ ಕಾಂಗ್ರೆಸ್ ಅನ್ನೂ ಖಂಡಿಸಬೇಕು ಎಂದು ಸಮಿತಿ ಹೇಳಿದೆ.



ಅದರಂತೆ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಸ್ರೇಲ್ ವಿರುದ್ಧ ಮೆರವಣಿಗೆ ನಡೆಸಿದರು, ಇದು ತುಂಬಾ ಗಂಭೀರವಾಗಿದೆ. ಇದರಿಂದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಯೋತ್ಪಾದಕ ಸಂಘಟನೆ ‘ಹಮಾಸ್’ಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ. ಈ ಘಟನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.ಯ) ಮೂಲಕ ತನಿಖೆ ನಡೆಸಬೇಕೆಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top