ಮಂಗಳೂರು: ಹಿರಿಯ ಚೇತನ ಶತಾಯುಷಿ ಆನಂದ ಆಳ್ವ ಮೂಲತಃ ಕೃಷಿ ಕುಟುಂಬದಿಂದ ಬಂದವರು ಅವರ ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಇನ್ನೊಬ್ಬರಿಗೆ ಅನುಕರಣೀಯ. ಕನ್ನಡ ನಾಡು-ನುಡಿ, ಸಂಸ್ಕೃತಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿರುವ ಡಾ. ಮೋಹನ ಆಳ್ವ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದವರು.
ಪೆರುವೋಡಿ ನಾರಾಯಣ ಭಟ್ಟರು ಹಾಸ್ಯ ಕಲಾವಿದರಾಗಿ ಯಕ್ಷಗಾನವನ್ನು ಬಹಳ ಎತ್ತರಕ್ಕೆ ಕೊಂಡು ಹೋದವರು.
ಶೇಖರ ಅಜೆಕಾರು ಪತ್ರಕರ್ತ, ಸಾಹಿತಿ,ಸಂಘಟಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದವರು. ಇದೀಗ ನಮ್ಮನ್ನು ಅಗಲಿದ ಈ ಮೇಲಿನ ಮೂರು ಮಹಾಚೇತನಕ್ಕೆ ಸಂತಾಪವನ್ನು ಸೂಚಿಸಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದಕ. ಜಿಲ್ಲಾ ಕನ್ನಡ ಸಾಹಿತ್ಯ ಅಧ್ಯಕ್ಷ ಪ್ರೊ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ