ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ರಾಷ್ಟ್ರೀಯ ಕಾರ್ಯಾಗಾರ
ಉಜಿರೆ: “ದೇಹವೆಂಬುದು ಒಂದು ರಥ. ಆ ರಥದೊಳಗೆ ರಥಿ. ಅದನ್ನು ಓಡಿಸುವುದು ಐದು ಕುದುರೆಗಳು. ಮನಃಶಾಸ್ತ್ರದ ಪ್ರಕಾರ ರಥವೆಂಬುದು ದೇಹ. ರಥಿಯೆಂಬುವುದು ಆತ್ಮ. ಐದು ಕುದುರೆಗಳು ನಮ್ಮ ಪಂಚೇಂದ್ರಿಯಗಳು. ಆ ಐದು ಕುದುರೆಗಳಿಗೆ ಲಗಾಮು ಹಾಕುವುದು ನಮ್ಮ ಮನಸ್ಸು" ಎ೦ದು ನಿಮ್ಹಾನ್ಸ್ ನ ನಿವೃತ್ತ ಮನೋವೈದ್ಯ ಹಾಗೂ ಪ್ರಾಧ್ಯಾಪಕ, ಸಮಾಧಾನ ಕೇಂದ್ರ ಬೆಂಗಳೂರು, ಇದರ ಸ್ಥಾಪಕ ಡಾ. ಸಿ.ಆರ್. ಚಂದ್ರಶೇಖರ್ ಹೇಳಿದರು.
ಅವರು ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ (ಐ.ಕ್ಯೂ.ಎ.ಸಿ.) ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಅ.10ರಂದು ‘ಮೆಂಟಲ್ ಹೆಲ್ತ್ ಆ್ಯಂಡ್ ಕೌನ್ಸೆಲಿಂಗ್: ನರ್ಚರಿಂಗ್ ದಿ ಸ್ಕಿಲ್ಸ್’ ವಿಷಯದ ಕುರಿತು ಆಯೋಜಿಸಲಾದ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶೇ.80 ರಷ್ಟು ದೈಹಿಕ ಖಾಯಿಲೆಗಳು ಮಾನಸಿಕ ಒತ್ತಡದಿಂದ ಉಂಟಾಗುತ್ತವೆ. ಪ್ರಸನ್ನ ಕಾಯ, ಪ್ರಸನ್ನ ಮನ, ಪ್ರಸನ್ನ ಇಂದ್ರಿಯ, ಮತ್ತು ಪ್ರಸನ್ನ ಆತ್ಮವು ವ್ಯಕ್ತಿಯನ್ನು ದೈಹಿಕ ತೊಂದರೆಗಳಿಂದ ದೂರವಿಡುತ್ತದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಡಾ. ಸಿ.ಆರ್. ಚಂದ್ರಶೇಖರ್ ಅವರು ‘ಬ್ರೇನ್ ಆ್ಯಂಡ್ ಬಿಹೇವಿಯರ್’, ‘ಮ್ಯಾನೇಜಿಂಗ್ ನೆಗೆಟಿವ್ ಇಮೋಷನ್ಸ್’, ‘ಪಿನ್ಸಿಪಲ್ಸ್ ಆಫ್ ಕೌನ್ಸೆಲಿಂಗ್’ ವಿಷಯಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ., ಐಕ್ಯುಎಸಿ ಸಂಯೋಜಕ ಪ್ರೊ. ಜಿ.ಆರ್. ಭಟ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾಲೇಜಿನ ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಂದನಾ ಜೈನ್ ಸ್ವಾಗತಿಸಿದರು. ಉಪನ್ಯಾಸಕಿ ಅಶ್ವಿನಿ ಅಭಿನಂದನಾ ಪತ್ರ ವಾಚಿಸಿದರು. ವಿದ್ಯಾರ್ಥಿನಿ ವರ್ಷಾ ಜೆ. ವಂದಿಸಿದರು. ವಿದ್ಯಾರ್ಥಿನಿ ಅನುಪ್ರಿಯ ಘೋಶ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ