ಹುನಗುಂದ: ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ 9 ರಿಂದ ಒಂದು ತಿಂಗಳವರೆಗೆ 'ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ' ಅಭಿಯಾನಕ್ಕೆ ಅಮರಾವತಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಬಸವರಾಜ ಕಮತರ ಬೇಡಿಕೆಗಳನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ನಂತರ ಎಸ್ಸಿ ಕಾಲೋನಿಯಲ್ಲಿ ಕೂಲಿ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವ್ಯಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಮಹಿಳೆಯರು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಈ ಯೋಜನೆಗಳನ್ನು ಪಡೆಯುವುದರ ಪಡೆಯುವುದರ ಮೂಲಕ ತಮ್ಮ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬಳಿಕ ಕೂಲಿ ಕಾರ್ಮಿಕರ ಸಾರ್ವಜನಿಕರ ಬೇಡಿಕೆಗಳನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕರು, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಹುಲ್ಲಳ್ಳಿ ಬಸವರಾಜ ಬೇಗಾರ್ ಧುರೀಣರಾದ ಆಸಂಗಿಪ್ಪ ಮಾದರ್, ಶಿವು ಗೋನಾಳ್, ಜಕ್ಕನಗೌಡ ರಾಟಿ, ಸಂಗನಬಸಪ್ಪ ಕೋಟೆಕಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಚಂದ್ರಗಿರಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸಹಾಯಕ ಲೆಕ್ಕಾಧಿಕಾರಿ ಕಾಂತ ಊದಗೇರಿ, ಕಂಪ್ಯೂಟರ್ ಆಪರೇಟರ್ ಮಂಜು ಮಾದರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ