ಕೆ.ಆರ್.ಪೇಟೆ: ಆಕಸ್ಮಿಕ ಅಡುಗೆ ಅನಿಲ ಸ್ಪೋಟಕದಿಂದ ಸಂಕಷ್ಟಕ್ಕೆ ಸಿಲುಕಿದ ಡಾಣನಹಳ್ಳಿ ಗ್ರಾಮದ ಬಡ ರಾಜನಾಯಕ್ ಕುಟುಂಬಕ್ಕೆ ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಆರ್ಥಿಕ ಸಹಾಯ ನೀಡಿದರು.
ಕೆ.ಆರ್.ಪೇಟೆ ತಾಲೂಕಿನ ಡಾಣನಹಳ್ಳಿ ಗ್ರಾಮದ ಬಡ ಕುಟುಂಬ ರಾಜನಾಯ್ಕ ಮತ್ತು ತಾಯಮ್ಮ ಅವರ ನಿವಾಸದಲ್ಲಿದ್ದ ಅಡುಗೆ ಅನಿಲ ಆಕಸ್ಮಿಕವಾಗಿ ಸೋಮವಾರ ಬೆಳಿಗ್ಗೆ ಸ್ಪೋಟಗೊಂಡು ಪರಿಣಾಮ ಮನೆಯಲ್ಲಿದ್ದ ವಸ್ತುಗಳು ನಾಶವಗಿದ್ದು, ಕುಟುಂಬದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯೊಳಗಿದ್ದ ಆಹಾರ ಪದಾರ್ಥ ಸೇರಿದಂತೆ ದಿನಬಳಕೆ ವಸ್ತುಗಳು ಹಾಗೂ ಸಮವಸ್ತ್ರ ಸೇರಿದಂತೆ ಲಕ್ಷಾಂತರರೂ ಬೆಲೆಬಾಳುವ ವಿವಿಧ ವಸ್ತುಗಳು ಸಂಪೂರ್ಣ ಸುಟ್ಟು ಕರುಕಲಾಗಿ ಕುಟುಂಬವು ಬೀದಿಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿತ್ತು. ಈ ಆಕಸ್ಮಿಕ ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ತೆರಳಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ರವರು ಬಡ ಕುಟುಂಬದ ನಿವಾಸಕ್ಕೆ ಭೇಟಿ ನೀಡಿ ಆತ್ಮಸ್ಥೈರ್ಯ ನೀಡುವ ಜೊತೆಗೆ ಆರ್ಥಿಕ ನೆರವು ನೀಡಿದರು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ರವರು, ಗ್ಯಾಸ್ ಸಿಲಿಂಡರ್ ಅನ್ನು ಜಾಗ್ರತೆಯಿಂದ ಉಪಯೋಗಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಂಡಿದ್ದರೆ ಗ್ಯಾಸ್ ಸಿಲಿಂಡರ್ ಸ್ಪೋಟದಂತಹ ಘಟನೆಯನ್ನು ತಪ್ಪಿಸಬಹುದಾಗಿದೆ. ಗ್ಯಾಸ್ ಪೂರೈಕೆ ಮಾಡುವವರು ಲೀಕ್ ಆಗುತ್ತಿರುವ ಸಿಲಿಂಡರ್ ನೀಡಲು ಬಂದರೆ ತಿರಸ್ಕರಿಸಬೇಕು. ಸುಸ್ಥಿತಿಯಲ್ಲಿರುವ ಸಿಲಿಂಡರ್ ಮಾತ್ರ ಸ್ವೀಕರಿಸಿ ಬಳಕೆ ಮಾಡಬೇಕು. ಜೊತೆಗೆ ಗ್ಯಾಸ್ ಕಂಪನಿಯವರು ಉಚಿತವಾಗಿ ನೀಡುವ ವಿಮಾ ಸೌಲಭ್ಯವನ್ನು ನೀಡುವಂತೆ ಅನಿಲ ವಿತಕರಿಗೆ ಒತ್ತಾಯ ಮಾಡಬೇಕು ಎಂದು ಗ್ಯಾಸ್ ಬಳಕೆ ಮಾಡುವ ತಾಯಂದಿರಿಗೆ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಬ್ಬೇಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ದೇವರಾಜು, ನವೀನ್, ವಿಜಯ್ ಕುಮಾರ್,ಅಶೋಕ್ ಕುಮಾರ್, ರಾಮೇಗೌಡ, ಕೆಂಪನಾಯ್ಕ, ಧರ್ಮರಾಜು, ಚೆಲುವ ನಾಯ್ಕ, ವಿಜಯ್ ನಾಯ್ಕ, ಮಲ್ಲೇಶ್, ರವಿ ನಾಯ್ಕ, ಗಂಜಿಗೆರೆ ಮಹೇಶ್, ಮನು ಮಾಕವಳ್ಳಿ, ಸೇರಿದಂತೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ