ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ವರುಣನ ಆಗಮನಕ್ಕೆ ಕಾಯುತ್ತಿರುವ ರೈತರು ಇಂದು (ಅ.13) ಬೆಳಗ್ಗೆ ಮಾರುತೇಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ವೇದಮೂರ್ತಿ ಬಸಯ್ಯನವರು ಹಿರೇಮಠ ಇವರ ಪಾದ ಪೂಜೆ ಮಾಡುವುದರ ಮೂಲಕ ಸಪ್ತಾಹ ಭಜನೆಗೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದರು.
ಊರಿನ ಸಂಪ್ರದಾಯದಂತೆ ಸಪ್ತಾಹ ಭಜನೆಯಲ್ಲಿ, ನಿರಂತರ ಏಳು ದಿನಗಳ ಕಾಲ ಏಳು ಜನ ಭಜಕರ ಒಂದೊಂದು ತಂಡ ಎರಡು ಗಂಟೆಗಳ ಕಾಲ, ಪಾಳಿಯಲ್ಲಿ ದೇವರ ಮುಂದೆ ನಿಂತುಕೊಂಡು ಭಜನೆ ಮಾಡುತ್ತಾರೆ. ಒಂದು ತಂಡದ ಎರಡು ಗಂಟೆಯ ಪಾಳಿ ಮುಗಿಯುತ್ತಿದ್ದಂತೆ ಇನ್ನೊಂದು ಏಳು ಮಂದಿಯ ತಂಡ ಭಜನೆಗೆ ಸಿದ್ಧವಾಗಿ ಬಂದಿರುತ್ತದೆ. ಈ ರೀತಿ ಏಳು ದಿನಗಳ ವರೆಗೆ ನಿರಂತರ ಭಜನೆ ನಡೆಯುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


