ನಿಟ್ಟೆ: ಉಡುಪಿಯ ಎಂ.ಜಿ. ಕ್ರೀಡಾಂಗಣದಲ್ಲಿ ಸೆ.15 ರಂದು ನಡೆದ ದಸರಾ ಜಿಲ್ಲಾ ಕ್ರೀಡಾಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳು 14 ಪ್ರಶಸ್ತಿಗಳನ್ನು ಗೆದ್ದು ಸಾಧನೆಗೈದಿರುವರು.
ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ಕುಮಾರಿ ಪ್ರತೀಕ್ಷಾ - 800 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ.
ಡಾ. ಎನ್ಎಸ್ಎಎಂ ಪದವಿಪೂರ್ವ ಕಾಲೇಜಿನ ಕುಮಾರಿ. ನಂದಿನಿ ಜಿ ಅವರು 1,500 ಮೀಟರ್ ಮತ್ತು 3,000 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದರು.
ಡಾ. ಎನ್ಎಸ್ಎಎಂ ಪದವಿಪೂರ್ವ ಕಾಲೇಜಿನ ಕುಮಾರಿ. ಸಾಕ್ಷಿ - 1,500 ಮೀಟರ್, 3,000 ಮೀಟರ್ ಓಟದಲ್ಲಿ ಹಾಗೂ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಡಾ.ಎನ್ಎಸ್ಎಎಂ ಹೈಸ್ಕೂಲ್ ನ ಕುಮಾರಿ. ರಶ್ಮಿತಾ - 100 ಮೀಟರ್ ಮತ್ತು 200 ಮೀಟರ್ ಮತ್ತು 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವರು.
ಡಾ.ಎನ್ಎಸ್ಎಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಕುಮಾರಿ. ಸುಜೀಕ್ಷಾ - 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದರು.
ಡಾ.ಎನ್.ಎಸ್.ಎ.ಎಂ ಪಿ.ಯು ಕಾಲೇಜಿನ ಕುಮಾರಿ ಜೀವಿತಾ 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ತುಷಾರ್ ಶೆಟ್ಟಿ - ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದರು.
ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ಬಸವರಾಜ್ 100 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಮತ್ತು 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ಕುಲದೀಪ್ ಕುಮಾರ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಮತ್ತು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕವನ್ನು ಪಡೆದರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ತರುಣ್ ಜೈನ್ 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ಸಮಿತ್ 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ಆದಿತ್ಯ 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗಳಿಸಿರುವರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ನವೀನ್ 4×400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿರುವರು.
ಡಾ. ಎನ್ಎಸ್ಎಎಂ ಪಿ.ಯು ಕಾಲೇಜಿನ ಗುರುರಾಜ್ 4× 400 ಮೀಟರ್ ರಿಲೇಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


