ಸುರತ್ಕಲ್: ವಿದ್ಯಾರ್ಥಿನಿಯರು ಆತ್ಮವಿಶ್ವಾಸವನ್ನು ಗಳಿಸಿಕೊಂಡು ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಮಹಿಳೆಯರು ಸ್ವ ಉದ್ಯಮಿಗಳಾಗುವ ಮೂಲಕ ಸ್ವಾವಲಂಬಿ ಬದುಕನ್ನು ನಿರ್ವಹಿಸಲು ಸಾಧ್ಯವಿದೆ ಎಂದು ಮಹಾರಾಜ ಫ್ಯಾಮಿಲಿ ರೆಸ್ಟೋರೆಂಟ್‍ನ ವ್ಯವಸ್ಥಾಪಕ ಪಾಲುದಾರೆ ಕೋಮಲ್ ಪ್ರಭು ನುಡಿದರು.
ಅವರು ಗೋವಿಂದದಾಸ ಕಾಲೇಜಿನ ಮಹಿಳಾ ವೇದಿಕೆ, ಉದ್ಯಮಶೀಲತಾ ಅಭಿವೃದ್ಧಿ ವೇದಿಕೆ, ಗ್ರಾಹಕ ವೇದಿಕೆ ಮತ್ತು ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ನಡೆದ ಮಹಿಳಾ ಉದ್ಯಮಶೀಲತೆ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸುರತ್ಕಲ್‍ನ ಇನ್ನರ್‍ವೀಲ್ ಕ್ಲಬ್‍ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ಮಾತನಾಡಿ, ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದರು.
ಆಶಯ ಭಾಷಣ ಮಾಡಿದ ಗೋವಿಂದದಾಸ ಕಾಲೇಜಿನ ಆಡಳಿತ್ಮಾಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ ಮಹಿಳಾ ಉದ್ಯಮಿಗಳು ಯಶಸ್ಸನ್ನು ಕಾಣುತ್ತಿರುವುದು ಸ್ವಾಗತಾರ್ಹವಾಗಿದ್ದು ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕಾಗಿದೆ ಎಂದರು.
ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಡಾ, ರೇಶ್ಮಾ ರಾವ್ ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಪಿ.ಅಧ್ಯಕ್ಷತೆ ವಹಿಸಿದ್ದರು.ಉಪ ಪ್ರಾಂಶುಪಾಲ ಪ್ರೊ.ರಮೇಶ್ ಭಟ್‍ಎಸ್.ಜಿ. ಉದ್ಯಮಶೀಲತಾ ಅಭಿವೃದ್ಧಿ ವೇದಿಕೆಯ ಸಂಯೋಜಕಿ ಪುನೀತಾ ಆರ್., ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ಇನ್ನರ್‌ಲ್ ಕ್ಲಬ್‍ನ ಉಪಾಧ್ಯಕ್ಷೆ ಮಾಲತಿ ಸಚ್ಚಿದಾನಂದ ಸದಸ್ಯೆ ಪೂರ್ಣಿಮಾ, ಹಿಂದೂ ವಿದ್ಯಾದಾಯಿನೀ ಸಂಸ್ಥೆಯ ಆಡಳಿತಾಧಿಕಾರಿ ಮೃದುಲಾ ಉಪಸ್ಥಿತರಿದ್ದರು.
ದಯಾ ಎಂ. ಸುವರ್ಣ ಸ್ವಾಗತಿಸಿ, ಸುರತ್ಕಲ್ ಇನ್ನರ್ ವೀಲ್‍ಕ್ಲಬ್‍ನ ಕಾರ್ಯದರ್ಶಿ ಪಾವನಾ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ