ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ಎನ್‌ಜಿಒ ಯುನೈಟೆಡ್ ವೇ ಮುಂಬೈ ಸಹಯೋಗದೊಂದಿಗೆ ಉಳ್ಳಾಲ ಬೀಚ್‌ನಲ್ಲಿ ಸೆಪ್ಟೆಂಬರ್ 13 ರಿಂದ 15 ರವರೆಗೆ ಮೂರು ದಿನಗಳ "ಉಳ್ಳಾಲ ಬೀಚ್ ಸ್ವಚ್ಛತಾ ಕಾರ್ಯಕ್ರಮ" ಯಶಸ್ವಿಯಾಗಿ ನಡೆಯಿತು. ಮುಂಬೈನ ಯುನೈಟೆಡ್ ವೇ ಪ್ರಾಜೆಕ್ಟ್ ಲೀಡ್ ಶ್ರೀ. ಆಂಡ್ರ್ಯೂ ಡಯಾಸ್, ಫೀಲ್ಡ್ ಆಫೀಸರ್ ಶ್ರೀ. ಸಂದೀಪ್ ಶೆಟ್ಟಿ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕರಾದ ಡಾ. ಲವಿನಾ ಡಿ'ಮೆಲ್ಲೋ ಮುಂದಾಳತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೂರು ದಿನಗಳ ಅವಧಿಯಲ್ಲಿ, ಎಂಬಿಎ, ಎಂಎಸ್ ಡಬ್ಲ್ಯು, ಬಿಎಜೆ ಎಂಸಿ, ಬಿಎಸ್ ಡಬ್ಲ್ಯು, ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಸೇರಿದಂತೆ ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳು ಈ ಅರ್ಥಪೂರ್ಣ ಪ್ರಯತ್ನದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಬೀಚ್ ಕ್ಲೀನಿಂಗ್ ಡ್ರೈವ್ ಗೆ ಪೂರ್ವ ತಯಾರಿಯಾಗಿ ಸೆ.9 ರಂದು ನಡೆದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಜಾಗ್ರತಿ ಕಾರ್ಯಕ್ರಮದಲ್ಲಿ ಮುಂಬೈನ ಯುನೈಟೆಡ್ ವೇ ಪ್ರಾಜೆಕ್ಟ್ ಲೀಡ್ ಶ್ರೀ. ಆಂಡ್ರ್ಯೂ ಡಯಾಸ್, ಫೀಲ್ಡ್ ಆಫೀಸರ್ ಶ್ರೀ. ಸಂದೀಪ್ ಶೆಟ್ಟಿ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಡೀನ್ ಪ್ರೊ. ವೆಂಕಟೇಶ್ ಅಮೀನ್ ಪರಿಸರ ಜಾಗ್ರತಿ ಮೂಡಿಸಿದರು.
300 ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ಬೀಚ್ ಶುಚಿಗೊಳಿಸುವ ಕಾರ್ಯಕ್ರಮಕ್ಕೆ ವಿನಿಯೋಗಿಸುವ ಮೂಲಕ ಬೀಚ್ ನ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಗಣನೀಯ ಪ್ರಭಾವ ಬೀರಿದರು. ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ವೇ ಮುಂಬೈ ನಡುವಿನ ಜಂಟಿ ಕಾರ್ಯಕ್ರಮವು ಸಮುದಾಯ ಸಹಯೋಗದ ಶಕ್ತಿಯನ್ನು ಮತ್ತು ಪರಿಸರ ಸುಸ್ಥಿರತೆಗೆ ಯುವ ಮನಸ್ಸುಗಳ ಬದ್ಧತೆಯನ್ನು ಪ್ರದರ್ಶಿಸಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕರಾದ ಡಾ. ಲವಿನಾ ಡಿ'ಮೆಲ್ಲೋ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು.
ಇನ್ ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್ ಆಂಡ್ ಹ್ಯುಮಾನಿಟೀಸ್ ಸಹ ಪ್ರಾಧ್ಯಾಪಕಿ ಡಾ.ವಿದ್ಯಾ ಎನ್., ಬಿಬಿಎ ಎಚ್‌ಒಡಿ ಪ್ರೊ.ಶಿಲ್ಪಾ ಕೆ., ಬಿಕಾಂನ ಎಚ್‌ಒಡಿ ಪ್ರೊ.ಶರ್ಮಿಳಾ ಶೆಟ್ಟಿ, ಪ್ರೊ.ಜಾಯ್ಸನ್ ಫ್ರಾಂಕಿ ಕಾರ್ಡೋಜಾ, ಪ್ರೊ. ಶ್ವೇತಾ ಎನ್ಎಸ್., ಪ್ರೊ.ಸುಶ್ಮಿತಾ, ಪ್ರೊ. ಪರೇಶ್ ಸಾಲಿಯಾನ್, ಪ್ರೊ. ಪ್ರಜ್ಞಾ ಮತ್ತು ಶ್ರೀ ಶಿವರಾಜ್ ಅವರು ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ