ಕಾವೇರಿ ನಮ್ಮದು ದೌರ್ಜನ್ಯ ಸಲ್ಲದು

Upayuktha
0


ಜನಜೀವನದ ದಿನನಿತ್ಯದಲ್ಲಿ ನೀರಿನ ಅಭಾವ ಹೆಚ್ಚಿದೆ. ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಷಯ ಇಂತಹ ವಿಷಯದಲ್ಲಿ ಏಕೆ ಭೇದ-ಭಾವ. ನಮ್ಮದೊಂದು ಚಿಕ್ಕ ವಸ್ತುವನ್ನು ಇತರರಿಗೆ ನೀಡಬೇಕಾದರೆ ಯೋಚನೆ ಮಾಡುವ ಜನ ಇರುವಾಗ ನಮ್ಮ ಕಾವೇರಿಯನ್ನು ಅದೆಷ್ಟು ಸುಲಭವಾಗಿ ಇತರರಿಗೆ ನೀಡಿದರು. ನಮ್ಮಲ್ಲೇ ರೈತರು ಜನ ಜೀವನದಲ್ಲಿ ನೀರಿನ ಅಭಾವದಿಂದ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಅಂತಹದರಲ್ಲಿ ಏಕೆ ಈ ಶೋಷಣೆ. ನಮ್ಮ ಕಾವೇರಿ ನಮ್ಮದು ಎಂದು ಹೋರಾಟಕ್ಕೆ ಇಳಿದಂತಹ ಜನಗಳ ಮೇಲೆ ನಮ್ಮ ಸರ್ಕಾರದ ಜನರೇ ನಮ್ಮ ಕಾನೂನುನಿಂದ  ಸಂರಕ್ಷಿಸಬೇಕಾದಂತಹ ನಮ್ಮ ಪೊಲೀಸರಿಂದಲೇ ನಮಗೆ ತಿಳಿಸಬೇಕೇನು?


ಎಲ್ಲಿದೆ ನ್ಯಾಯ? ಕುಡಿಯಲು ನೀರಿಲ್ಲ, ರೈತರಿಗೆ ನೀರಿಲ್ಲ, ಬೆಳೆ ಬೆಳೆಯುವುದು ಹೇಗೆ? ಆಹಾರ ತಿನ್ನುವುದು ಹೇಗೆ? ಒಮ್ಮೆ ಯೋಚಿಸಿ ನೋಡಿ ಸರ್ಕಾರ ನಿಮ್ಮ ಕೆಲಸ ಸರಿ ಇದೆಯೇ ಎಂದು  ನಮ್ಮ ಕಾವೇರಿಯನ್ನು ಹರಿ ಬಿಡಲು ನೀವ್ಯಾರು? ಕಾವೇರಿಯ ಮೇಲೆ ನಿಮ್ಮ ಹಕ್ಕಿಲ್ಲ ನಮ್ಮೆಲ್ಲರ ಹಕ್ಕಿದೆ. ತಮಿಳುನಾಡಿಗೆ ನೀರು ಹೇಗೆ ಕೊಟ್ಟಿರಿ? ನಮ್ಮಲ್ಲಿ ಹೆಚ್ಚಾಗಿ ಇದ್ದರೆ ತಾನೇ ಇತರರಿಗೆ ನೀಡಲು ಮುಂದಾಗುವುದು. ಹೆಚ್ಚಾಗಿ ಇಲ್ಲದಿದ್ದ ಮೇಲೆ ನಾವು ಕೊಡುವುದಿಲ್ಲ ಅನ್ನುವುದರಲ್ಲಿ ತಪ್ಪಿಲ್ಲ. ದಯಮಾಡಿ ನಮ್ಮ ಕಾವೇರಿ ನೀರನ್ನು ನಮ್ಮಲ್ಲಿಯೇ ಉಳಿಸಿ. ಉಳಿಸಲು ನಮ್ಮ ಕನ್ನಡ ಪರ ಹೋರಾಟಗಾರರಿದ್ದಾರೆ. ಸ್ವಾಭಿಮಾನಿ ಕನ್ನಡಿಗರಿದ್ದಾರೆ. ಪ್ರತಿಯೊಬ್ಬರು ಕನ್ನಡದ  ಮಕ್ಕಳೇ? ಕರ್ನಾಟಕದಲ್ಲಿ ಕನ್ನಡದ ಮಕ್ಕಳಾಗಿ ನಮ್ಮ ಕಾವೇರಿಯನ್ನು ನಾವು ಯಾಕೆ ಕೊಡಬೇಕು ಇತರರಿಗೆ? ನಿಮ್ಮ ಮನೆಯ ಮಕ್ಕಳನ್ನು ಹೇಗೆ ಸಾಕುತ್ತಿರೋ ಹಾಗೆ ತಾನೇ ನಮ್ಮ ಕರ್ನಾಟಕದ ಕಾವೇರಿಯನ್ನು ನಾವು ನೀಡೆವು. ಎಂತಹ ಹೋರಾಟಕ್ಕೂ ನಾವೆಲ್ಲ ಸಿದ್ದ. ಅಂದ ಮೇಲೆ ನಮ್ಮ ಕಾವೇರಿಯನ್ನು ನಮ್ಮಲ್ಲೇ ಉಳಿಸಿ ಹೊರತು ಇತರರಿಗೆ ನೀಡುವ ಅವಶ್ಯಕತೆ ಇಲ್ಲ.


ನಮ್ಮಲ್ಲೇ ನೀರಿನ ಬರಬಂದು ಸಾಯುತ್ತಿರುವ ಜನರು ಎಷ್ಟೋ ಇದ್ದಾರೆ. ಇಂತಹ ಜನರಿಗಾಗಿ ನೀರನ್ನು ಕೊಡದೆ ಇತರರ ಪ್ರಾಣ ಉಳಿಸುವಂತಹ ಕೆಲಸ ಬೇಡ. ಬದುಕಿನಲ್ಲಿ ನೀರು ಬಹಳ ಮುಖ್ಯವಾದದ್ದು. ನಮ್ಮ ಹೋರಾಟಗಾರರು ಬೀದಿಗಳಲ್ಲಿ ಸಂಘಟನೆಗಳ ಮುಖಾಂತರ ಬೀದಿಗಿಳಿದರೆ ಅವರ ಮೇಲೆ ಏಕೆ ದೌರ್ಜನ್ಯ. ಅವರ ನೋವುಗಳನ್ನು ನೀವು ಕೇಳುತ್ತಿದ್ದೀರಾ? ನಮ್ಮೆಲ್ಲರ ಪರವಾಗಿ ನಾಯರಂತೆ ನಿಂತು ಹೋರಾಟವನ್ನು ಮಾಡುತ್ತಿರುವಂತಹ ನಮ್ಮ ಜನಗಳನ್ನು  ಏಕೆ ಬಂಧಿಸುವಿರಿ. ನಮ್ಮ ಜನರಾಗಿ ನಮ್ಮ ಸಂರಕ್ಷಣೆ ಮಾಡಬೇಕಾದ ಪೊಲೀಸರ ಕೈಯಲ್ಲೇ ನಮಗೆ ಹೊಡೆಸುವಿರಲ್ಲ. ಅವರು ವಿಧಿ ಇಲ್ಲದೆ ನಮ್ಮ ಮೇಲೆ ಕೈ ಮಾಡುವಂತೆ ಮಾಡುತ್ತಿದ್ದೀರಲ್ಲ. ನಮ್ಮ ಕಾವೇರಿ ನಮಗೆ ಸಿಗುವವರೆಗೂ ನಾವು ನಮ್ಮ ಹೋರಾಟವನ್ನು ನಿಲ್ಲಿಸೆವು. ಜನಗಳ ದುಃಖಗಳನ್ನು ಅರಿತು ಬಾಳಬೇಕೆ ಹೊರತು ಅವರಿಗೆ ನಷ್ಟವಾಗುವಂತಹ ಕೆಲಸಗಳನ್ನು ಮಾಡಬಾರದು. ಯಾರನ್ನು ಕೇಳಿ ನೀವು ಕೊಟ್ಟಿರಿ ನಮ್ಮ ಕಾವೇರಿಯನ್ನು. ಮೊದಲು ನಮಗೆ  ಹೆಚ್ಚಾಗಿ ಇರದ ನೀರು ಹೇಗೆ ಬೇರೆಯವರಿಗೆ ನೀಡೋಣ. ಅದನ್ನು ನಿಲ್ಲಿಸಿ ನಮಗೆ ನ್ಯಾಯ ನೀಡಿ. ಯಾವ ಯೋಜನೆ ಅಡಿ ಕಾವೇರಿಯನ್ನು ಬಿಟ್ಟಿರೋ ಆ ಯೋಜನೆಯನ್ನು ಕೈಬಿಡಿ. ನಮಗೆ ನ್ಯಾಯವನ್ನು ಒದಗಿಸಿ. ನಮ್ಮ ಕಾವೇರಿಯನ್ನು ನಮಗೆ ಹಿಂತಿರುಗಿಸಿದರೆ ಸರಿ. ಇಲ್ಲದಿದ್ದರೆ ಇಡೀ ಕರ್ನಾಟಕದಾದ್ಯಂತ ರೊಚ್ಚಿಗೆದ್ದ ಕನ್ನಡಿಗರ ರುದ್ರ ರೂಪವನ್ನು ಕಾಣಬೇಕಾಗುತ್ತದೆ. ಒಮ್ಮೆ ಯೋಚಿಸಿ ರುದ್ರ ರೂಪಕ್ಕಿಂತ ಶಾಂತ ರೂಪ ಒಳ್ಳೆಯದು. ದಯಮಾಡಿ ನಮ್ಮ ಕಾವೇರಿ ನಮ್ಮ ಹಕ್ಕು ಎಂಬುದನ್ನು ತಿಳಿದು ಕಾವೇರಿ ನಮ್ಮದು ದೌರ್ಜನ್ಯ ಸಲ್ಲದು.

ಜೈ ಹಿಂದ್, ಜೈ ಕರ್ನಾಟಕ ಮಾತೆ.



-ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top