ಪ್ರತಿಯೊಬ್ಬರು ಹಿಂದಿ ಭಾಷೆಯನ್ನು ಗೌರವಿಸಬೇಕು: ಪ್ರೊ. ಪಿ. ಕೃಷ್ಣಮೂರ್ತಿ

Upayuktha
0




ಸುರತ್ಕಲ್: ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಿಂದಿ ಭಾಷೆಯು ಪ್ರಮುಖ ಪಾತ್ರ ವಹಿಸಿತು. ಪ್ರತಿಯೊಬ್ಬರು ಹಿಂದಿ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು ಎಂದು ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ನುಡಿದರು. 



ಅವರು ಕಾಲೇಜಿನ ಹಿಂದಿ ವಿಭಾಗವು ಆಚರಿಸಿದ ರಾಷ್ಟ್ರೀಯ ಹಿಂದಿ ದಿವಸ್ ಉದ್ಘಾಟಿಸಿ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಕಾಮತ್ ಅವರು ಹಿಂದಿ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.



ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಕುಮಾರ ಮಾದರ ಅವರು ಹಿಂದಿ ಪ್ರಾಚೀನ ಮತ್ತು ಸರಳ ಭಾಷೆಯಾಗಿದ್ದು ಈ ಭಾಷೆಯನ್ನು ಇನ್ನೂ ಸಮೃದ್ಧವಾಗಿ ಬೆಳೆಯುವಂತೆ ಯುವ ಜನರು ಪ್ರಯತ್ನಿಸಬೇಕೆಂದರು. 



ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ದೀಪಾ ಶೆಟ್ಟಿ, ಶರ್ಮಿತಾ ಯು., ಆಶ್ವಿನ್, ರಶ್ಮಿ ಕಾಯರ್‍ಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಶಾಂತ್ ಎಂ.ಡಿ. ಉಪಸ್ಥಿತರಿದ್ದರು. ಹಿಂದಿ ಪ್ರಾಧ್ಯಾಪಕಿ ರಮಿತಾ ಸ್ವಾಗತಿಸಿ ಶ್ರಾವ್ಯ ವಂದಿಸಿದರು. ಜುವೈರಿಯಾ ನಾಸಿರಾ ನಿರೂಪಿಸಿದರು.




Post a Comment

0 Comments
Post a Comment (0)
To Top