ಬಿ.ಜಿ.ಎಲ್.ಸ್ವಾಮಿ ಕನ್ನಡದ ಅಪರೂಪ ಸರ್ವ ಕುತೂಹಲಿ ಸಾಹಿತಿ: ಡಾ.ಎಚ್.ಎಸ್ ಸತ್ಯನಾರಾಯಣ

Upayuktha
0




ಕಾರ್ಕಳ: ಕನ್ನಡ ಶಾಸನಗಳಿಂದ ಮೊತ್ತಮೊದಲಿಗೆ ಸಸ್ಯ ಸಂಕುಲಗಳ ಕುರಿತು ಅಧ್ಯಯನ ಮಾಡಿದ ಹೆಗ್ಗಳಿಕೆ ಡಾ.ಬಿ.ಜಿ ಎಲ್.ಸ್ವಾಮಿಯವರಿಗೆ ಸಲ್ಲುತ್ತದೆ. ‘ಹಸಿರು ಹೊನ್ನು’ ಕೃತಿ ಸಾಹಿತ್ಯ ಲೋಕದಲ್ಲಿ ಸಸ್ಯ ಶಾಸ್ತ್ರಗಳ ಕುರಿತಂತೆ ಇರುವ ಪ್ರಸಿದ್ಧ ಮತ್ತು ವೈಶಿಷ್ಟ್ಯಪೂರ್ಣ ಕೃತಿಯಾಗಿದೆ ಎಂಬುವುದಾಗಿ ಸಾಹಿತಿ ಮತ್ತು ಖ್ಯಾತ ವಿಮರ್ಶಕ ಡಾ.ಎಚ್‍ಎಸ್ ಸತ್ಯನಾರಾಯಣ ಹೇಳಿದರು.



ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಹಾಗೂ ಕನ್ನಡ ಸಂಘ ಕಾಂತಾವರ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ  ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ “ಬಿಜಿಎಲ್ ಸ್ವಾಮಿ ಎಂಬ ಗಿಡಮರಗಳ ಒಡನಾಡಿ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. 



ಡಿವಿಜಿಯವರು ಮಾನವ ಜಗತ್ತಿನ ಭಾವಗಳನ್ನು ಕುರಿತು ಬರೆದರೆ ಮಗ ಬಿ.ಜಿ.ಎಲ್ ಸ್ವಾಮಿಯವರು ಸಸ್ಯ ಸಂಕುಲಗಳ ಹೃದಯಗಳ ಭಾವಗಳ ಜೊತೆ ಬೆರೆತು ಅರಿತರು. ತಂದೆ ಡಿ.ವಿ.ಜಿಯವರಿಂದ ಶಿಸ್ತುಬದ್ಧ ಬದುಕಿನೊಂದಿಗೆ ಹಾಸ್ಯ ವಿನೋದ ಪ್ರವೃತ್ತಿಯಿಂದಲೇ ವಿಡಂಬನೆಗಳನ್ನೂ ಮಾಡಿದವರು. ಅವರು ಒಬ್ಬ ಒಳ್ಳೆಯ ಪಿಟೀಲು ವಾದಕರಾಗಿ, ವರ್ಣರಂಜಿತ ಕಸೂತಿ ಕಲಾಕಾರರಾಗಿಯೂ ಇದ್ದರು ಎಂದು ಬಿ.ಜಿ.ಎಲ್ ಸ್ವಾಮಿಯವರ ಜೀವನ ದರ್ಶನವನ್ನು ಪರಿಚಯಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾಸಾಪದ ರಾಜ್ಯಾಧ್ಯಕ್ಷ ಸಾಹಿತಿ ಡಾ.ನಾ.ಮೊಗಸಾಲೆಯವರು ವಹಿಸಿದ್ದರು. ಅಭಾಸಾಪ ತಾಲೂಕು ಸಮಿತಿಯ ಗೌರವಾಧ್ಯಕ್ಷ ಎಸ್ ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಧಾಕರ ಶಾನುಭೋಗರು ಪ್ರಾರ್ಥಿಸಿದರು. ಕಾರ್ಯದರ್ಶಿ ಗಣೇಶ್ ಜಾಲ್ಸೂರು ಸ್ವಾಗತಿಸಿ, ಜತೆ ಕಾರ್ಯದರ್ಶಿ ವೀಣಾ ರಾಜೇಶ್ ಉಪನ್ಯಾಸಕಾರರನ್ನು ಪರಿಚಯಿಸಿದರು. ಸದಸ್ಯರಾದ ಬಾಲಕೃಷ್ಣ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಭಾಸಾಪ ತಾಲೂಕು ಸಮಿತಿಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆಯವರು ವಂದಿಸಿದರು. ನಿವೃತ್ತ ಪ್ರಾಂಶುಪಾಲೆ ಇಂದಿರಾ.ಕೆ. ರವರು ಸಹಕರಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top