ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಕೆ ರಾಮಮೂರ್ತಿ ರಾವ್ ಆಯ್ಕೆ

Upayuktha
0


ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಕರಾವಳಿ ಪರಿಷತ್ ಇವರು ಮುಂದಿನ ಡಿಸೆಂಬರ್ 24 ಮತ್ತು 25 ರಂದು ಉಡುಪಿಯ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಹಮ್ಮಿಕೊಳ್ಳಲಿರುವ ಎರಡು ದಿನಗಳ ಶಾಸ್ತ್ರೀಯ ನೃತ್ಯ ಕಲಾವಿದರ ನೃತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕರಾವಳಿ ಮೂಲದ ನೃತ್ಯ ವಿದ್ವಾಂಸ ನಾಟ್ಯಾಚಾರ್ಯ ಪ್ರೊಫೆಸರ್ ಕೆ ರಾಮಮೂರ್ತಿ ರಾವ್ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು.


ಪ್ರೊ. ಕೆ ರಾಮಮೂರ್ತಿಯವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು ನೂಪುರ ಎಂಬ ನೃತ್ಯ ಸಂಸ್ಥೆಯ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ. ಓರ್ವ ಕಲಾವಿದರಾಗಿ, ಗುರುವಾಗಿ, ನೃತ್ಯ ನಿರ್ದೇಶಕರಾಗಿ, ಕಲಾ ವಿಮರ್ಶಕರಾಗಿ ಮತ್ತು ಬರಹಗಾರರಾಗಿ ನೃತ್ಯಕ್ಷೇತ್ರದಲ್ಲಿ ಅವರದು ವೈವಿಧ್ಯಮಯ ವ್ಯಕ್ತಿತ್ವ. ನಾಟ್ಯಾಚಾರ್ಯ ದಿ. ವಿಷ್ಣುದಾದಾಸ್ ಇವರಲ್ಲಿ ನೃತ್ಯಭ್ಯಾಸ ಮೈಸೂರಿನ ಆಸ್ಥಾನ ವಿದ್ವಾನ್ ಎಸ್ ಎನ್ ಮರಿಯಪ್ಪ ಮತ್ತು ಲಕ್ಷ್ಮಿಪತಿ ಭಾಗವತರಿಂದ ಸಂಗೀತಭ್ಯಾಸ ಮಾಡಿರುವರು.


ನಟುವಾಂಗನಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ಭರತನಾಟ್ಯದ ಜೂನಿಯರ್ ಸೀನಿಯರ್ ವಿದ್ವತ್ ಈ ಎಲ್ಲಾ ಪರೀಕ್ಷೆಗಳಲ್ಲೂ ರಾಂಕ್ ವಿಜೇತರು  ನೃತ್ಯಕ್ಕೆ ಸಂಬಂಧಿಸಿದ ನೂರಾರು ಲೇಖನಗಳನ್ನು ಪ್ರಕಟಿಸಿರುವರು ವಿಶೇಷವಾಗಿ ಇವರ ಸಂಪಾದಕತ್ವದ 'ನೃತ್ಯ ದರ್ಪಣಂ ಎಂಬ ಪುಸ್ತಕವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಕಟಿಸಿರುತ್ತದೆ. ಅಲ್ಲದೆ 'ನಾಟ್ಯ ಶಾಸ್ತ್ರ ಮಂಜರಿ' ಎಂಬ ಪುಸ್ತಕಕ್ಕೆ ಅಕಾಡೆಮಿಯಿಂದ ವಿಶೇಷ ಬಹುಮಾನ ಪಡೆದ ಪುಸ್ತಕವಾಗಿದೆ. ಅಕಾಡೆಮಿಯ ಪುರಸ್ಕಾರ ಅಲ್ಲದೆ ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿರುತ್ತಾರೆ ಎಂದು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top