ಸದಾ ಆರೋಗ್ಯವಾಗಿರಲು ನ್ಯಾಚುರೋಪತಿಯೆಂಬ ಪಾರಂಪರಿಕ ಚಿಕಿತ್ಸೆ ಬಹಳ ಉತ್ತಮ: ಡಾ. ಸುಜಾತಾ

Upayuktha
0


ಉಜಿರೆ: ಕಾಲ ಬದಲಾಗಿದೆ. ಜೀವನಶೈಲಿ ಬದಲಾಗಿದೆ. ಆಹಾರ ಪದ್ಧತಿ ಬದಲಾಗಿದೆ. ಇವೆಲ್ಲದರ ಜೊತೆಗೆ ಮನುಷ್ಯನಲ್ಲಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಮನುಷ್ಯ ಊಟದಷ್ಟು ಔಷಧಿಗಳು ಔಷಧಿಯ ಪ್ರಮಾಣದಷ್ಟು ಊಟವನ್ನೂ ಮಾಡುವ ಪರಿಸ್ಥಿತಿಯಿದೆ. ಬದಲಾದ ಜೀವನಶೈಲಿಯಿಂದ ಉಂಟಾಗಿರುವ ಆರೋಗ್ಯ ತೊಂದರೆಗಳಿಗೆ ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಪರಿಹಾರವಾಗಿದೆ. ಪ್ರಕೃತಿ ಚಿಕಿತ್ಸೆ ನಮ್ಮ ಜೀವನಕ್ಕೆ ತುಂಬಾ ಹತ್ತಿರ ಇರುವ ಒಂದು ಚಿಕಿತ್ಸೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀಮತಿ ಡಾ.ಸುಜಾತರವರು ಹೇಳಿದರು. ಅವರು ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಈ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇದರ ತತ್ವಗಳನ್ನು ಆಧಾರವಾಗಿಟ್ಟುಕೊಂಡು ನೀಡುವ ಚಿಕಿತ್ಸೆ ಪ್ರಕೃತಿ ಚಿಕಿತ್ಸೆ ಇದು ಅತ್ಯಂತ ಸುಲಭವಾಗಿ ಸಿಗುವ ಹಾಗೂ ನಾವು ಸುಲಭವಾಗಿ ಪಾಲನೆ ಮಾಡಲು ಸಹಕಾರಿಯಾಗುವ ಚಿಕಿತ್ಸೆ. ಉತ್ತಮ ಹಾಗೂ ಮಿತ ಆಹಾರ, ತಾಜಾ ಗಾಳಿ, ವ್ಯಾಯಾಮ, ಬಿಸಿಲು, ಧ್ಯಾನ ಮತ್ತು ಸರಿಯಾದ ಮಾನಸಿಕ ವರ್ತನೆ, ಇವೆಲ್ಲವೂ ದೇಹ ಮತ್ತು ಮನಸ್ಸನ್ನು ಸದೃಢವಾಗಿಡುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತವೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಧ.ಮಂ. ಮಹಿಳಾ ಐಟಿಐನ ಬೋಧಕ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಎಂ.ಡಿ ವಿದ್ಯಾರ್ಥಿನಿಯರಾದ ಡಾ. ಇಂದಿರಾ ಹಾಗೂ ಬಳಗ ಕಾರ್ಯಕ್ರಮ ಆಯೋಜಿಸಿದ್ದು ನಂತರ ಮಹಿಳಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top