ಆಹಾರ, ಔಷಧಗಳ ಮಿತಬಳಕೆ ಆರೋಗ್ಯಕ್ಕೆ ದಾರಿ

Upayuktha
0

ರಾಸಾಯನಿಕಗಳ ಬಳಕೆ ಬೇಡ



ಉಜಿರೆ: ನಾವು ಜೀವನದಲ್ಲಿ ದಿನನಿತ್ಯ ಬಳಸುವ ಆಹಾರ ವಸ್ತುಗಳು, ಔಷಧಿಗಳು ಮತ್ತು ಪಾನೀಯಗಳು ಇವೆಲ್ಲವೂ ಮಿತವಾಗಿ ಬಳಸಬೇಕು. ಅದೇ ರೀತಿ ಇತರ ಅಂದರೆ ಡೀಸೆಲ್, ಪೆಟ್ರೋಲ್, ನೈಲ್ ಪಾಲಿಷ್, ವೈಟ್ನರ್ ಇತ್ಯಾದಿಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಅವುಗಳ ಪರಿಮಳ ಹೆಚ್ಚು ಹೊತ್ತು ನಮ್ಮ ಮೂಗಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ಜನಜಾಗೃತಿ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ವಿವೇಕ್ ವಿನ್ಸೆಂಟ್ ಪಾಯ್ಸ್ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಅವರು ಮದ್ಯಪಾನ/ ಧೂಮಪಾನ/ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧನ. ಇದನ್ನು ನಾವು ಮಾಡುವುದಾಗಲಿ ಮಾಡುವವರಿಗೆ ಸಹಕಾರ ನೀಡುವುದಾಗಲಿ ಒಳ್ಳೆಯದಲ್ಲ. ಅದೇ ರೀತಿ ಜೀವಕ್ಕೆ ಹಾನಿ ಉಂಟು ಮಾಡುವ string juice ಅತಿಯಾದ ಔಷಧ ಬಳಕೆ, ವೈದ್ಯರ ಸಲಹೆ ಪಡೆ ಯದೆ ಔಷದ ಸೇವನೆಯ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಕ್ಯಾನ್ಸರ್ ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆ ಮುಂತಾದ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ನಾವು ಸಮಾಜದಲ್ಲಿ ಯಾವ ರೀತಿ ವರ್ತಿಸಿದರೆ ಉತ್ತಮ ಹಾಗೂ ನಮ್ಮ ದೇಹದ ಸ್ವಾಸ್ಥ್ಯ ಕಾಪಾಡುವುದೇ ಸ್ವಾಸ್ಥ್ಯ ಸಂಕಲ್ಪ ಇದನ್ನು ನಾವು ನೀವು ಪ್ರತಿಯೊಬ್ಬ ಕನ್ನಡಿಗನೂ ಪಾಲಿಸಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಇವರು ಉಪಸ್ಥಿತರಿ ದ್ದರು. ಉಜಿರೆ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹಾಗೂ ಯೋಜನಾಧಿ ಕಾರಿ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಜ್ಞಾ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top