ಪಾಸಿಟಿವ್ ಪಲ್ಸ್ ಫೌಂಡೇಶನ್‌ನಿಂದ ಪೌರ ಕಾರ್ಮಿಕರಿಗಾಗಿ ನಾಳೆ (ಸೆ.25) ಉಚಿತ ನೇತ್ರ ಚಿಕಿತ್ಸಾ ಶಿಬಿರ

Upayuktha
0


ಬೆಂಗಳೂರು: ನಮ್ಮ ದೈನಂದಿನ ಜೀವನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೌರಕಾರ್ಮಿಕರು ನಮ್ಮ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ. ಅದು ಮನೆಗಳಿಂದ ಕಸವನ್ನು ಸಂಗ್ರಹಿಸುವುದಾಗಲಿ ಅಥವಾ ನಮ್ಮ ಪ್ರದೇಶವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಲಿ ಅವರ ಕಾರ್ಯ ನಿಜವಾಗಿಯೂ ಶ್ಲಾಘನೀಯ. ಅವರಂತೆಯೇ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ)ಯ ಕಾರ್ಮಿಕರು ಸಹ ನಮ್ಮ ಮನೆಯ ಪೈಪ್ ಬ್ಲಾಕ್‌ ಆದಾಗಲೋ ಅಥವಾ ಕುಡಿಯುವ ನೀರು ಬರದಿದ್ದಾಗ ಮಾತ್ರ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ.


ಬೆಸ್ಕಾಂನ ಕಾರ್ಮಿಕರು 24x7 ಕೆಲಸ ಮಾಡಿ ನಮಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಶ್ರಮಿಸುತ್ತಾರೆ.


ಜವಾಬ್ದಾರಿಯುತ ನಾಗರಿಕರಾಗಿ ಇಂತಹ ಕಾರ್ಮಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. 

ಇಂತಹ ಅನೇಕ ವಿಚಾರಗಳನ್ನು ಮನಗಂಡ ಪಾಸಿಟಿವ್ ಪಲ್ಸ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಕೆಂಗೇರಿ ವಲಯದ ಪೌರಕಾರ್ಮಿಕರಿಗೆ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರವನ್ನು ರೋಟರಿ ಕ್ಲಬ್ ಆಫ್ ಕೋರಮಂಗಲ ರೋಟರಿ ಅವಾಯ್ಡ್ ಬ್ಲೈಂಡ್‌ನೆಸ್ ಫೌಂಡೇಶನ್ ಸಹಯೋಗದಲ್ಲಿ ಸೋಮವಾರ (ಸೆ.25) ಆಯೋಜಿಸಲಾಗಿದೆ.

 


ಸ್ಥಳ: ಬಿಬಿಎಂಪಿ ಅಂಬೇಡ್ಕರ್ ಸಮುದಾಯ ಭವನ ಕೆಂಗೇರಿ ಸ್ಯಾಟಲೈಟ್ ಟೌನ್


ಈ ಶಿಬಿರವು ಕಾರ್ಮಿಕ ವರ್ಗದವರಿಗೆ ಸಹಾಯ ಮಾಡಲು ಒಂದು ಉತ್ತಮ ಅವಕಾಶವಾಗಿದೆ. ಇದರಿಂದ ಕಾರ್ಮಿಕರು ಉತ್ತಮವಾಗಿ ಕೆಲಸ ಮಾಡಲು ಒಂದು ಪ್ರೇರಣೆ ಆಗುತ್ತದೆ. ಈ ನೇತ್ರ ಶಿಬಿರವನ್ನು ಯಶಸ್ವಿಗೊಳಿಸಲು ಸಂಘಟಕರು ಸಾರ್ವಜನಿಕರ ಬೆಂಬಲ ಕೋರಿದ್ದಾರೆ. 

ಈ ಕಾರ್ಯಕ್ಕೆ ಸಹಾಯ ಮಾಡಲು ಇಚ್ಛಿಸುವವರು ಕೆಳಗೆ ತಿಳಿಸಲಾದ ಸಂಸ್ಥೆಯ ಖಾತೆಗೆ ಜಮಾ ಮಾಡಬಹುದು ಎಂದು ಫೌಂಡೇಶನ್‌ ಕಾರ್ಯದರ್ಶಿ ಜಯಪ್ರಕಾಶ್ ಪಿ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Name: POSITIVE PULSE FOUNDATION

Account number: 10125906383

IFSC: IDFB0081106

SWIFT code: IDFBINBBMUM

Bank name: IDFC FIRST

Branch: BANGALORE-BANASHANKARI BRANCH


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top