ದಕ್ಷಿಣ ಕೊರಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಂಗಳೂರಿನ ನೃತ್ಯ ತಂಡ

Upayuktha
0





ಮಂಗಳೂರು:
ಮಂಗಳೂರಿನ ಹೆಸರಾಂತ ನೃತ್ಯ ತಂಡ ಗಾನನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡ ಇದೇ ಅಕ್ಟೋಬರ್ ತಿಂಗಳ 4 ರಿಂದ 14 ತಾರೀಕಿನವರೆಗೆ ದಕ್ಷಿಣ ಕೊರಿಯಾದ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಲು ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.



ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಐ.ಸಿ.ಸಿ.ಆರ್ ದಾಖಲಿತ ಪ್ರತಿನಿಧಿಯಾಗಿರುವ ಇವರು ದಕ್ಷಿಣ ಕೊರಿಯಾದ `ಸಾರಂಗ್’ ಉತ್ಸವದಲ್ಲಿ ಹಾಗೂ ಇನ್ನಿತರ 8 ಪಟ್ಟಣಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಇವರೊಂದಿಗೆ ಸಹಕಲಾವಿದರಾಗಿ ರಶ್ಮಿ ಉಡುಪ, ಅಂಕಿತ ರೈ, ಮೇಘ ಮಲರ್, ತ್ವಿಶಾ ಶೆಟ್ಟಿ, ದಿಶಾ ಗಿರೀಶ್, ಪೂರ್ವೀ ಕೃಷ್ಣ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ತೆರಳಲಿದ್ದಾರೆ. ಈ ತಂಡದ ಸಂಪೂರ್ಣ ಪ್ರಾಯೋಜಕತ್ವವನ್ನು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ವಹಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top