ಬ್ಯಾಂಕ್ ಮ್ಯಾನೇಜರ್ : ನೋಡು ವೆಂಕಣ್ಣ, ನಾವು ಬ್ಯಾಂಕ್‍ನಿಂದ ಬಂದಿದಿವಿ, ಈ ಚಾಕ್ಲೇಟ್ ತಿನ್ನು. ಇದರ ಬೆಲೆ ಒಂದ್ರುಪಾಯಿ. ತುಂಬ ಚನಾಗಿರುತ್ತೆ. ಇದರಲ್ಲಿ ಎಲ್ಲ ವಿಟಮಿನ್ಸ್, ಪೋಸ್ಟಿಕಾಂಶಗಳು, ರುಚಿ ಎಲ್ಲ ಇರುತ್ತೆ..."
ವೆಂಕಣ್ಣ ಸಾಲಗಾರ (55 ವರ್ಷದ ಬಾಲಕ!) : ನಾನ್ ತಿನ್ನಲ್ಲ, ನಂಗೆ ಚಾಕ್ಲೇಟ್ ಬೇಡ
ಬ್ಯಾಂಕ್ ಮ್ಯಾನೇಜರ್ : ಹಂಗೆಲ್ಲ ಹಟ ಮಾಡಬಾರದು ವೆಂಕಣ್ಣ, ಒಂದು ತಿಂದು ನೋಡು
ವೆಂಕಣ್ಣ ಸಾಲಗಾರ : ಇಲ್ಲ ನಾನ್ ತಿನ್ನಲ್ಲ. ನೀವು ನಂಗೆ ಚಾಕ್ಲೇಟ್ ತಿನ್ನಿಸಿ, ಲೋನ್ ವಾಪಾಸ್ ಕೇಳ್ತೀರಿ... ಅಲ್ವಾ...!? ನಾನು ಚಾಕ್ಲೇಟ್ ತಿನ್ನಲ್ಲ.
ಬ್ಯಾಂಕ್ ಮ್ಯಾನೇಜರ್ : ನೋಡು ನೀನು ಈ ಚಾಕ್ಲೇಟ್ ತಿಂದು ಸಾಲ ತೀರಿಸಿದರೆ, ನಿಂಗೆ ಮತ್ತೆ ಹೊಸಾ ಡಬಲ್ ಸಾಲ ಕೊಡ್ತೀವಿ.
ವೆಂಕಣ್ಣ ಸಾಲಗಾರ : ಯಾವಾಗ ಕೊಡ್ತೀರಿ?
ಬ್ಯಾಂಕ್ ಮ್ಯಾನೇಜರ್ : ಈಗಲೇ ಕೊಡ್ತೀವಿ, ತಂದಿದಿವಿ
ವೆಂಕಣ್ಣ ಸಾಲಗಾರ : ನೋಡೋಣ ತೋರಿಸಿ
ಬ್ಯಾಂಕ್ ಮ್ಯಾನೇಜರ್ : ನೋಡು ಒಂದು ಲಕ್ಷ ಇದೆ ಇದರಲ್ಲಿ.
ವೆಂಕಣ್ಣ ಸಾಲಗಾರ : ಸುಳ್ಳು, ಅದರಲ್ಲಿ ಒಂದ್ಲಕ್ಷ ಇಲ್ಲ. ಬಿಡಿ ನನ್ನ, ನಂಗಿವತ್ತು ತ್ವಾಟಕ್ಕೆ ಔಷಧಿ ಹೊಡೆಯುವ ಆಟ ಇದೆ, ಹೋಗ್ಬೇಕು.
ಬ್ಯಾಂಕ್ ಮ್ಯಾನೇಜರ್ : ಇಲ್ಲ ವೆಂಕಣ್ಣ, ನೀನೆ ಎಣಿಸು, ತಗ.
ವೆಂಕಣ್ಣ ಚಾಕ್ಲೇಟ್ ಬಾಯಿಗೆ ಹಾಕಿಕೊಂಡು ಎಣಿಸಿದ!! ಹೌದು ಒಂದ್ಲಕ್ಷ ಇದೆ.
ವೆಂಕಣ್ಣ ಸಾಲಗಾರ : ಹೌದು ಬುದ್ದಿಯೋರೆ, ಒಂದ್ಲಕ್ಸ ಇದೆ!!. ಇರಿ ಒಂದ್ನಿಮಿಸ
(ಅಂತ ಹೇಳಿದ 55 ವರ್ಷದ ಬಾಲಕ ವೆಂಕಣ್ಣ ಅದನ್ನು ಒಳಗಡೆ ತಗೊಂಡು ಹೋಗಿಟ್ಟು, ಅದರಲ್ಲೇ 53,000 ಹಣ ಎಣಿಸಿ ತಂದುಕೊಟ್ಟ!!)
ಇಕಳಿ ಬುದ್ದಿ, ಹಳೇ ಸಾಲ 50000, ಬಡ್ಡಿ 3000 ಸೇರಿಸಿ 53000 ಇದೆ. ಒಂದ್ಲಕ್ಸ ಸಾಲನ ಲೆಕ್ಕಕ್ಕೆ ಬರ್ಕಳಿ
ಚಾಕ್ಲೇಟ್ ಬಲು ಪಸಂದಾಗಿದೆ, ಇನ್ನೊಂದು ಚಾಕ್ಲೇಟ್ ಕೊಡಿ ಬುದ್ದಿ.
ವಯಸ್ಸು ಬೆಳೆದಂತೆ ಹಾಲುಗಲ್ಲದ (ಗಡ್ಡ ಹಣ್ಣಾಗಿ!) ಚಾಕ್ಲೇಟ್ ತಿನ್ನುವವರ ಬುದ್ದಿ ಬೆಳೆದಿರುತ್ತದೆ!!! ಎಂಬಲ್ಲಿಗೆ ಚಾಕ್ಲೇಟ್ v/s ಸಾಲ ಪ್ರಹಸನ ಸಮಾಪ್ತಿ
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


