ಹಾಸನ: ತಮಿಳುನಾಡಿಗೆ ಕಾವೇರಿ ನೀರು ತಕ್ಷಣ ನಿಲ್ಲಿಸಲು ವಿವಿಧ ಸಂಘಟನೆಗಳ ಒತ್ತಾಯ

Upayuktha
0

ಕರ್ನಾಟಕದಲ್ಲೇ ಕುಡಿಯುವ ನೀರಿಗೆ ಬರ ಬಂದಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪರವಾಗಿ ಸಾಮಾಜಿಕ ಕಾರ್ಯಕರ್ತೆ ಹೆಚ್‌.ಎಸ್. ಪ್ರತಿಮಾ ಹಾಸನ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಹಾಸನ: ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು. ನಮ್ಮಲ್ಲಿ ಬಹಳ ನೀರಿನ ತೊಂದರೆ ಇದೆ. ರಾಜ್ಯ ಸರ್ಕಾರ ನ್ಯಾಯ ಕೊಡಿಸಲು ಮುಂದಾಗಬೇಕು. ನೀರು ಬಿಟ್ಟಿರುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಸರಕಾರದ ಧೋರಣೆಯನ್ನು ವಿರೋಧಿಸಿ ಬಂದ್‌ಗೆ ಬೆಂಬಲ ನೀಡುತ್ತಿರುವುದಾಗಿ ಅಖಿಲ ಡಾ. ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಮತ್ತು ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಬಳಗದ ಮತ್ತು ಹಾಸನ ಮುದ್ರಣಕಾರ ಸಂಘ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ, ರಾಜ್ಯದ ಹಿತಕ್ಕಾಗಿ ನಮ್ಮೆಲ್ಲರ ಕಾವೇರಿಯನ್ನು ನಮ್ಮಲ್ಲೇ ಉಳಿಸಬೇಕೆಂದು ಹೆಚ್. ಎಸ್. ಪ್ರತಿಮಾ ಹಾಸನ್  ಕೇಳಿಕೊಂಡರು. ಸಂಘದ ಅಧ್ಯಕ್ಷರಾದ ಎಚ್. ಎಸ್. ರತೀಶ್ ಕುಮಾರ್ ಮತ್ತು ಕುಮಾರ್ ಮಹಾಂತೇಶ್, ಹೇಮಂತ್ ಕುಮಾರ್‌, ತುಳಸಿ ಪ್ರಸಾದ್, ಹಾಸನ ಗಾಣಿಗರ ಸಂಘದ ಅಧ್ಯಕ್ಷರಾದ ಯತ್ನಾಳ್ ಮೋಹನ್ ಕುಮಾರ್, ಸದಸ್ಯರು, ಪದಾಧಿಕಾರಿಗಳು ಜತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top