ಮಂಗಳೂರು: ಎಂಐಟಿ ವಿದ್ಯಾರ್ಥಿಗೆ ಟಾಟಾ ಕ್ವಿಜ್ ಪ್ರಶಸ್ತಿ

Upayuktha
1 minute read
0

ಮಂಗಳೂರು: ಟಾಟಾ ಕ್ರೂಸಿಬಲ್ ಕ್ಯಾಂಪಸ್ ಕ್ವಿಜ್ ಸ್ಪರ್ಧೆಯ ಕ್ಲಸ್ಟರ್ 3 ಫೈನಲ್‍ನಲ್ಲಿ ಮಣಿಪಾಲ ಎಂಐಟಿಯ ನಿಕುಂಜ್ ಶರ್ಮಾ ವಿಜಯಶಾಲಿಯಾಗಿದ್ದಾರೆ.


ವಿಜೇತ ವಿದ್ಯಾರ್ಥಿ ರೂ. 35 ಸಾವಿರ ಬಹುಮಾನ ಗೆದ್ದರು ಮತ್ತು ವಲಯ ಫೈನಲ್‍ನಲ್ಲಿ ಸ್ಥಾನ ಪಡೆದರು. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯದ ಬಿ. ಸ್ಫೂರ್ತಿ ರನ್ನರ್ ಅಪ್ ಆಗಿ ರೂ. 18,000/- ನಗದು ಬಹುಮಾನವನ್ನು ಗೆದ್ದರು.


ಈ ವರ್ಷ ಕ್ಯಾಂಪಸ್ ರಸಪ್ರಶ್ನೆಗಾಗಿ, ದೇಶವನ್ನು 24 ಕ್ಲಸ್ಟರ್‍ಗಳಾಗಿ ವಿಂಗಡಿಸಲಾಗಿದೆ ಮತ್ತು ಎರಡು ಹಂತದ ಆನ್‍ಲೈನ್ ಪ್ರಾಥಮಿಕ ಹಂತದ ಬಳಿಕ, ಪ್ರತಿ ಕ್ಲಸ್ಟರ್‍ನಿಂದ ಅಗ್ರ 12 ಮಂದಿ ಫೈನಲಿಸ್ಟ್‍ಗಳನ್ನು ವೈಲ್ಡ್ ಕಾರ್ಡ್ ಫೈನಲ್‍ಗೆ ಶಾರ್ಟ್‍ಲಿಸ್ಟ್ ಮಾಡಿ, ಅಗ್ರ 6 ಫೈನಲಿಸ್ಟ್‍ಗಳನ್ನು ಆಯ್ಕೆ ಮಾಡಲಾಗಿತ್ತು. ಕ್ಲಸ್ಟರ್ ವಿಜೇತರು ಝೋನಲ್ ಫೈನಲ್ಸ್ ಆನ್‍ಲೈನ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಮತ್ತು ರಾಷ್ಟ್ರೀಯ ಫೈನಲ್ಸ್ ನೇರ ಕಾರ್ಯಕ್ರಮವಾಗಿ ನಡೆಯಲಿದೆ ಎಂದು ಪ್ರಕಟಣೆ ಹೇಳಿದೆ.


ನಾಲ್ಕು ಝೋನಲ್ ಫೈನಲ್‍ಗಳಲ್ಲಿ ಅಗ್ರ ಅಂಕ ಪಡೆದವರು ರಾಷ್ಟ್ರೀಯ ಫೈನಲ್‍ಗೆ ಮುನ್ನಡೆಯುತ್ತಾರೆ. ರಾಷ್ಟ್ರೀಯ ಫೈನಲ್‍ನಲ್ಲಿ 8 ಫೈನಲಿಸ್ಟ್‍ಗಳು ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಾರೆ, ಅವರು ರೂ. 2.5 ಲಕ್ಷ ಮತ್ತು ಅಸ್ಕರ್ ಟಾಟಾ ಕ್ರೂಸಿಬಲ್ ಟ್ರೋಫಿ ಪಡೆಯುತ್ತಾರೆ. ರಾಷ್ಟ್ರೀಯ ವಿಜೇತರು ಮತ್ತು ಇಬ್ಬರು ಅಗ್ರ ಅಂಕ ಪಡೆದವರು ಗೌರವಾನ್ವಿತ ಟಾಟಾ ಸಮೂಹದ ಇಂಟರ್ನ್‍ಶಿಪ್ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top