ಮಂಗಳೂರು: ದೇಶದ ಡಿಜಿಟಲ್ ಆರ್ಥಿಕತೆ ಮತ್ತು ರಫ್ತು ಹೆಚ್ಚಿಸಲು ಹೊಸ ಸರಣಿ ಉಪಕ್ರಮಗಳನ್ನು ಅಮೆಜಾನ್ ಘೋಷಿಸಿದೆ. ಅಮೆಜಾನ್‍ನ ಭಾರತ ಮತ್ತು ವಿಕಾಸಶೀಲ ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಅಮಿತ್ ಅಗರ್‍ವಾಲ್ ಅವರು ಅಮೆಜಾನ್ ಸಂಭವ್ ಶೃಂಗಸಭೆಯ ನಾಲ್ಕನೇ ಆವೃತ್ತಿಯಲ್ಲಿ ಇದನ್ನು ಘೋಷಿಸಿದರು.
ಭಾರತದ ಅಂಚೆ ಇಲಾಖೆ ಮತ್ತು ಭಾರತೀಯ ರೈಲ್ವೆ ಜೊತೆಗಿನ ತನ್ನ ದೀರ್ಘಾವಧಿಯ ಸಂಬಂಧವನ್ನು ಬಲಪಡಿಸುವ ಮೂಲಕ ಕಂಪನಿಯು ಗಡಿಯಾಚೆಗಿನ ಸಮಗ್ರ ಸ್ವರೂಪದ ಸರಕು ಸಾಗಣೆ ಪರಿಹಾರಕ್ಕಾಗಿ ಭಾರತದ ಅಂಚೆ ಇಲಾಖೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದರು.
ಈ ಒಪ್ಪಂದವು ಇ-ಕಾಮರ್ಸ್ ರಫ್ತು ಅವಕಾಶವನ್ನು ದೇಶದಾದ್ಯಂತ ಲಕ್ಷಗಟ್ಟಲೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‍ಎಂಇ) ವಿಸ್ತರಿಸಲಿದೆ. ಅಮೆಜಾನ್ ತನ್ನ ಮಾರಾಟಗಾರರು ಭಾರತದಾದ್ಯಂತ ತಮ್ಮ ಗ್ರಾಹಕರಿಗೆ ಸರಕುಗಳನ್ನು ತ್ವರಿತವಾಗಿ ತಲುಪಿಸಲು ಅನುವು ಮಾಡಿಕೊಡಲು ಭಾರತೀಯ ರೈಲ್ವೆಯ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಎಫ್‍ಸಿ) ಜೊತೆಗೆ ಕೈಜೋಡಿಸಿದೆ.
ಮಾರಾಟಗಾರರ ನೆರವಿಗಾಗಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ 'ಅಮೆಜಾನ್ ಸಹ-ಎಐ' ವೈಯಕ್ತಿಕ ಡಿಜಿಟಲ್ ಅಸಿಸ್ಟಂಟ್ ಪರಿಚಯಿಸುತ್ತಿರುವುದಾಗಿಯೂ ಅಮೆಜಾನ್ ಘೋಷಿಸಿದೆ. 'ಸಂಭವ್ 2023ರಲ್ಲಿ ನಾನು ಅಮೆಜಾನ್ ಅನ್ನು ಅಭಿನಂದಿಸುತ್ತೇನೆ. 10 ದಶಲಕ್ಷ 'ಎಂಎಸ್‍ಎಂಇ'ಗಳನ್ನು ಡಿಜಿಟಲೀಕರಣಗೊಳಿಸಲು, 2 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು 2025ರ ವೇಳೆಗೆ ಭಾರತದಿಂದ 20 ಶತಕೋಟಿ ಡಾಲರ್ ಗಳಷ್ಟು ಇ-ಕಾಮರ್ಸ್ ರಫ್ತಿಗೆ ಕಾರ್ಯಯೋಜನೆ ರೂಪಿಸಿದೆ ಎಂದು ವಿವರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ