ಬೆಂಗಳೂರು: ಬಹಳ ದಿನಗಳಿಂದ ನಾಪತ್ತೆಯಾಗಿದ್ದ ಮಳೆರಾಯ ಇಂದು ರಾತ್ರಿ 9:30ರ ಸುಮಾರಿಗೆ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಕಡು ಬೇಸಿಗೆಯ ಬೇಗೆಯನ್ನೂ ಮೀರಿಸುವ ಬೇಗೆಯಲ್ಲಿ ನಲುಗಿರುವ ಜನತೆಗೆ ಸ್ವಲ್ಪ ಮಟ್ಟಿಗೆ ತಂಪೆರೆದಿದ್ದಾನೆ.
ಹವಾಮಾನ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಂಡುಬರುತ್ತಿದ್ದು, ಕೇವಲ 15-20 ವರ್ಷಗಳ ಹಿಂದೆ ಸಿಡಿಲು ಗುಡುಗುಗಳ ಮೇಳ ಬೆಂಗಳೂರಿನಲ್ಲಿ ಕೇಳಿಸುತ್ತಲೇ ಇರಲಿಲ್ಲ. ಈಗ ಕರಾವಳಿ ಭಾಗವನ್ನೂ ಮೀರಿಸುವಂತೆ ಸಿಡಿಲು ಅಬ್ಬರಿಸುತ್ತಿದ್ದು, ಮಳೆಯೂ ಸಹ ಸುರಿವಾಗಲೆಲ್ಲ ಧಾರಾಕಾರವಾಗಿಯೇ ಬೀಳುತ್ತಿದೆ. ಮಳೆ ಬಂದಾಗಲಂತೂ ಚಳಿ ಹಿಡಿಸುತ್ತಿದ್ದ ವಾತಾವರಣ ಸಹಜವಾಗಿದ್ದ ಬೆಂಗಳೂರಿನಲ್ಲಿ ಈಗ, ಮಳೆ ಬರುತ್ತಿರುವಾಗಲೇ ಬೆವರೂ ಸುರಿಯುವಂತಹ ಸ್ಥಿತಿ ಬಂದಿದೆ.
ಬದಲಾಗಿರುವ ಮನುಷ್ಯನಿಗೆ ಬದಲಾಗಿರುವ ಪ್ರಕೃತಿ ಪಾಠ ಕಲಿಸುತ್ತಿದೆ. ನಾವು ಮತ್ತೆ ಪ್ರಕೃತಿಯ ಶಿಶುವಾಗಿ ಬದಲಾದರೆ ಪ್ರಕೃತಿ ಸಹ ಪ್ರಕೃತಿ ಮಾತೆಯಾಗಿ ಬದಲಾದಾಳು. ಆದರೆ ನಾವೆಂದು ಬದಲಾಗೋಣ, ಹೇಗೆ ಬದಲಾಗೋಣ...? ಅದು ಸಾಧ್ಯವೇ...? ಕಾಲವೇ ಉತ್ತರಿಸಬೇಕು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ