ಮೈಸೂರು: ಮೈಸೂರಿನ ವಿಜಯನಗರ ಮೊದಲನೇ ಹಂತದಲ್ಲಿ (ಐಶ್ವರ್ಯ ಪೆಟ್ರೋಲ್ ಪಂಪ್ ವೃತ್ತದ ಬಳಿ) ಯುವ ಕ್ರೀಡಾ ತರಬೇತುದಾರ ರೋಹನ್ ಬಾರಿತ್ತಾಯ (ಉಡುಪಿಯ ಮಾಜಿ ಶಾಸಕ ಕೆ ರಘುಪತಿ ಭಟ್ಟರ ಸುಪುತ್ರ) ಪ್ರಜ್ವಲ್ ಮತ್ತು ರಾಷ್ಟ್ರೀಯ ಕ್ರೀಡಾಪಟು ಸಾಗರ್ ಎಂಬ ಮೂರು ಜನ ಮಿತ್ರರು ಸೇರಿ ಆರಂಭಿಸಿದ ನೂತನ ಕ್ರೀಡಾ ವಿಜ್ಞಾನ ಕೇಂದ್ರ ಎಕ್ಸ್ ಟ್ರಾನ್ಸೊ ಸಂಸ್ಥೆಯನ್ನು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ಉದ್ಘಾಟಿಸಿ ಶುಭ ಸಂದೇಶ ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಅಲ್ಲಿನ ದೇಹದಾರ್ಢ್ಯ ಉಪಕರಣಗಳನ್ನು ಬಳಸಿ ಅಲ್ಲಿದ್ದ ಯುವಕರನ್ನು ಪ್ರೋತ್ಸಾಹಿಸಿದರು. ಶಾಸಕ ಶ್ರೀವತ್ಸ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ