ಪುತ್ತೂರು: ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಬಹಳ ಮಹತ್ವವಿದೆ. ಕುತೂಹಲ ಯಾವಾಗ ಮೂಡುತ್ತದೆಯೋ ಅಲ್ಲಿ ಸಂಶೋಧನೆಗೆ ಮುಂದಾಗುತ್ತಾರೆ. ನಮ್ಮಲ್ಲಿ ಕುತೂಹಲ, ಆಸಕ್ತಿ, ಹಂಬಲ ಇದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ಇದರಿಂದ ವಿದ್ಯಾರ್ಥಿಗಳು ಬೆಳೆಯುತ್ತಾ ಸಮಾಜವನ್ನು ಬೆಳೆಸಿ ಅದರೊಂದಿಗೆ ದೇಶವು ಬೆಳೆಯುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರಿಗೆ ಔಷಧಿಗಳ ಬಗ್ಗೆ ತಿಳಿಸಿಕೊಡುವ ಕಾರ್ಯವನ್ನು ಫಾರ್ಮಸಿಸ್ಟ್ಗಳು ಮಾಡುತ್ತಾರೆ. ಈ ಸಂಸ್ಥೆಯು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇನ್ ಸ್ಟಿಟ್ಯೂಟ್ ಆಪ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಮತ್ತು ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಫಾರ್ಮಸಿ ಕ್ಷೇತ್ರದಲ್ಲಿ ಸಂಶೋಧನೆಗೆ ಬಹು ಬೇಡಿಕೆ ಇದೆ. ಪ್ರಧಾನ ಮಂತ್ರಿ ಆರಂಭಿಸಿದ ಆಯುಷ್ಮಾನ್ ಭವ ಕಾರ್ಯಕ್ರಮವು ಬಹಳಷ್ಟು ಅಂಶಗಳನ್ನು ಒಳಗೊಂಡಿದೆ. ಅದರಲ್ಲಿ ಒಂದು ಅಂಗದಾನದ ಪರಿಕಲ್ಪನೆ. ಈ ಬಾರಿಯ ವಿಶ್ವ ಫಾರ್ಮಸಿಸ್ಟ್ ದಿನದ ಧ್ಯೇಯ ಅಂಗದಾನ ಮಹಾದಾನವಾಗಿದೆ. ಅಂಗದಾನದ ಕಾರ್ಯ ನಡೆಯಲು ಸಮರ್ಪಕವಾದ ವ್ಯವಸ್ಥೆಗಳಿರಬೇಕು ಮತ್ತು ಅದು ವೈಜ್ಞಾನಿಕವಾಗಿ ನುರಿತ ತಜ್ಞರಿಂದ ನಡೆಯಬೇಕು ಇದರ ಕುರಿತಾದ ಅರಿವು ನಮ್ಮಲ್ಲಿ ಮೂಡಬೇಕು ಎಂದು ಹೇಳಿದರು.
ಡ್ರಗ್ಗಿಸ್ಟ್ ಮತ್ತು ಕೆಮಿಸ್ಟ್ ಅಸೋಸಿಯೇಷನ್ ಪುತ್ತೂರು ಇದರ ಅಧ್ಯಕ್ಷ ಹಾಗೂ ಹಿರಿಯ ಫಾರ್ಮಸಿಸ್ಟ್ ಪಿ. ವಸುದೇವ ಭಟ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಗೋಪಿನಾಥ್ ಶೆಟ್ಟಿ, ಖಜಾಂಜಿ ಮೂಲಚಂದ್ರ ಹಾಗೂ ಸದಸ್ಯರುಗಳಾದ ಡಾ. ಅಖಿಲೇಶ್ ಪಾಣಾಜೆ, ಯಶೋಧರ ಹಾಗೂ ಶ್ರೀ ರಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಸ್ವಾಗತಿಸಿ ಪ್ರಾಂಶುಪಾಲ ಡಾ. ಗುರುರಾಜ ಎಂ.ಪಿ ವಂದಿಸಿ ಉಪನ್ಯಾಸಕಿ ಪೂರ್ಣಿಮಾ ಕೆ.ಎನ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ