ಸ್ವಾವಲಂಬಿ ಜೀವನಕ್ಕೆ ಎನ್.ಎಸ್.ಎಸ್ ಬುನಾದಿ: ಡಾ. ನಾಗರತ್ನ ಕೆ.ಎ

Upayuktha
0





ಮಂಗಳೂರು: ನಮ್ಮನ್ನು ನಾವು ಅರಿತು, ಸಮಾಜದಲ್ಲಿ ಬೆರೆಯುವುದನ್ನು, ಅಗತ್ಯವಿದ್ದವರಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವುದನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಕಲಿಸುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಡಾ. ನಾಗರತ್ನ ಕೆ.ಎ ಹೇಳಿದರು. 



ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎನ್.ಎಸ್.ಎಸ್ ದಿನಾಚರಣೆ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಸೋಮವಾರ, ಮಾತನಾಡಿದರು, ಎನ್.ಎಸ್.ಎಸ್‌ನ ನಿಯಮಿತ ಮತ್ತು ವಾರ್ಷಿಕ ಕಾರ್ಯಕ್ರಮಗಳು ದೃಢತೆ, ಶಿಸ್ತು ಅಳವಡಿಸಿಕೊಳ್ಳಲು, ಸಾಂಸ್ಕೃತಿಕ ಪ್ರತಿಭೆಯನ್ನು ಹೊರಹಾಕಲು, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಭವಿಷ್ಯದಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬುನಾದಿಯಾಗುತ್ತವೆ ಎಂದರು. 



ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ತಂಡವಾಗಿ ಕೆಲಸ ಮಾಡಲು ಎನ್.ಎಸ್.ಎಸ್ ಕಲಿಸುತ್ತದೆ. ನಾವು ಸಂಕುಚಿತ ಭಾವನೆ ಬಿಟ್ಟು ಸಹಬಾಳ್ವೆಯೊಂದಿಗೆ ಸಾಧನೆ ಮಾಡಬೇಕು, ಎಂದರು. ಇದೇ ಸಂದರ್ಭದಲ್ಲಿ ಎನ್.ಎಸ್.ಎಸ್ ತಂಡಗಳ ನಾಯಕರು ಮತ್ತು ಸ್ವಯಂಸೇವಕರ ಆಯ್ಕೆ ಪ್ರಕ್ರಿಯೆ ನಡೆಯಿತು. 


ಕಾಲೇಜಿನ ಎನ್.ಎಸ್.ಎಸ್ ಘಟಕ- 2 ರ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ್ ನೆರೆದವರನ್ನು ಸ್ವಾಗತಿಸಿದರು. ಘಟಕ- 1 ರ ಕಾರ್ಯಕ್ರಮ ಅಧಿಕಾರಿ ಡಾ. ಗಾಯತ್ರಿ ಎನ್. ವಂದಿಸಿದರು. ಉಪನ್ಯಾಸಕಿ ನಿಧಿಶ್ರೀ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಶಹನಾ ಕಾರ್ಯಕ್ರಮ ನಿರೂಪಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


//

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top