ಜ್ಞಾನ ಕಲಿಕೆ ನಿರಂತರ ಪ್ರಕ್ರಿಯೆ : ಡಾ. ವಿ.ಕೆ ಯಾದವ ಸಸಿಹಿತ್ಲು

Upayuktha
0



ಸುರತ್ಕಲ್‌: ಜ್ಞಾನ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ವಿದ್ಯಾರ್ಥಿಗಳ ಬದುಕಿಗೆ ಸ್ಪಷ್ಟ ಗುರು ತೋರ್ಪಡಿಸುವ ಶಿಕ್ಷಕರನ್ನು ಸದಾ ನೆನಪಿಸಿ ಕೊಳ್ಳಬೇಕು ಎಂದು ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವಿ.ಕೆ ಯಾದವ ಸಸಿಹಿತ್ಲು ನುಡಿದರು. ಅವರು ಗೋವಿಂದದಾಸ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್ ಮತ್ತು ಶಿಕ್ಷಕ ರಕ್ಷಕ ಸಂಘದ ಸಹಭಾಗಿತ್ವದಲ್ಲಿ ನಡೆದ ಶಿಕ್ಷಕರ ದಿನಾಚರಣೆ- ಗುರವಂದನೆಯ ಮುಖ್ಯಅತಿಥಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿಗಳ ಅಭಿವೃದ್ಧಿಯಕಾರ್ಯದಲ್ಲಿ ಶಿಕ್ಷಕ ರಕ್ಷಕ ಸಂಘ ಹಾಗೂ ಅಲ್ಯುಮ್ನಿ ಅಸೋಸಿಯೇಶನ್‍ಗಳ ಪಾತ್ರ ಹಿರಿದಾಗಿದೆ ಎಂದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪೊ.ರಮೇಶ್ ಕುಳಾಯಿ ಮತ್ತುಉಪಪ್ರಾಚಾರ್ಯ ಪ್ರೊ.ರಮೇಶ್ ಭಟ್‍ಎಸ್.ಜಿ. ಶುಭ ಹಾರೈಸಿದರು.


ಗೋವಿಂದದಾಸ ಪಿ.ಯುಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ವೈ.ವಿ. ರತ್ನಾಕರರಾವ್, ಸುರತ್ಕಲ್‍ ರೋಟರಿಕ್ಲಬ್‌ನ ಅಧ್ಯಕ್ಷಯೋಗೀಶ್ ಕುಳಾಯಿ ಮುಖ್ಯ ಅತಿಥಿಗಳಾಗಿದ್ದರು.


ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ಅಧ್ಯಕ್ಷ ರಮೇಶ್‍ರಾವ್ ಎಂ.ಸ್ವಾಗತಿಸಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶೈಲಜಾ ಹೆಚ್.ಅತಿಥಿಗಳನ್ನು ಪರಿಚಯಿಸಿದರು. ದಯಾ ಎಂ. ಸುವರ್ಣ ಮತ್ತು ರಮಿತಾ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತುಅಲ್ಯುಮ್ನಿ ಅಸೋಸಿಯೇಶನ್ ವತಿಯಿಂದ ಶಿಕ್ಷಕ ಮತ್ತು ಶಿಕ್ಷಕಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.


ಅಲ್ಯಮ್ನಿ ಅಸೋಸಿಯೇಶನ್‍ನ ಉಪಾಧ್ಯಕ್ಷೆ ಡಾ. ಸಾಯಿಗೀತಾ, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಜೊತೆ ಕಾರ್ಯದರ್ಶಿ ಸತೀಶ್ ಸುರತ್ಕಲ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಉದಯಭಾಸ್ಕರ ವೈ.ವಿಮತ್ತು ಮಣಿ ಎಂ.ರೈ, ಸದಸ್ಯ ಮುರಾರಿರಾವ್, ಶಿಕ್ಷಕ ಸಂಘದ ಕಾರ್ಯದರ್ಶಿಗೀತಾ ಕೆ., ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಧರ್ಮರಾಜ್, ಸಲಹೆಗಾರರಾದ ಮಾಧವಕೋಟ್ಯಾನ್ ಮತ್ತು ನಾರಾಯಣಗೌಡ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top