ಪ್ರಕೃತಿ ಎಂಬುದು ಹೆತ್ತ ತಾಯಿ ಇದ್ದಂತೆ ಒಬ್ಬಳು ತಾಯಿ ಒಂದು ಮಗುವನ್ನು 9 ತಿಂಗಳು ತನ್ನ ಗರ್ಭದಲ್ಲಿ ಇರಿಸಿಕೊಂಡು ಗರ್ಭದಿಂದ ಹೊರ ಬಂದಮೇಲೆ ಆ ಮಗುವನ್ನು ಪ್ರಕೃತಿಯ ಮಡಿಲಿಗೆ ಹಾಕುತ್ತಾಳೆ ಪ್ರಕೃತಿ ನಮಗೋಸ್ಕರ ಎಲ್ಲವನ್ನು ಮಾಡುತ್ತಾಳೆ ಕೇಳಿದ್ದನ್ನೆಲ್ಲ ಕೊಡುತ್ತಾಳೆ.
ನಮಗೆ ಹಸಿವಾದಾಗ ಆಹಾರ ಬಾಯಾರಿದಾಗ ನೀರು ಉಸಿರಾಡಲು ಗಾಳಿ ನೆಲೆಸಲು ನೆಲ ಇದೆಲ್ಲವನ್ನು ಆಕೆ ಎಲ್ಲರಿಗೂ ಸಮಾನವಾಗಿ ನೀಡುತ್ತಾಳೆ ಆದರೆ ಮನುಷ್ಯನಿಗೆ ಇದು ಸಾಲದು ಆತನ ಆಸೆಗೆ ಕೊನೆಯೆ ಇರದು ತನಗೆ ನೀಡಿರುವ ಎರಡು ಕಾಲುಗಳಿಂದ ನಡೆಯದೆ ಮಲೀನಕ್ಕೆ ದಾರಿಯಾಗುವಂತಹ ವ್ಯವಸ್ಥೆಯತ್ತ ಸಾಗುತ್ತಿದ್ದಾನೆ ಅದೇ ಡೀಸೆಲ್ ಪೆಟ್ರೋಲ್ ಇಂಧನಗಳಂತಹ ವಾಹನಗಳು.
ಮನುಜನಿಗೆ ವಾಹನದಲ್ಲಿ ಸಾಗುತ್ತಿದ್ದಂತೆ ಉದಾಸೀನದೊಂದಿಗೆ ತಿರುಗಾಟದ ಹುಚ್ಚು ಬೆಳೆದುಬಿಡುತ್ತದೆ ವಾಹನಗಳೊಂದಿಗೆ ಸಾಗಿದ ಹಾಗೆಯೇ ತನ್ನ ಕೆಲಸಗಳು ಸುಲಭವಾಗಿ ಅದರಿಂದ ಲಾಭಗಳು ಹೆಚ್ಚಾಗಲಿ ಎನ್ನುವ ಮೋಹದಿಂದ ಕಾರ್ಖಾನೆಗಳನ್ನು ನಿರ್ಮಿಸಿದ ಇವುಗಳಿಂದ ಸಂಪೂರ್ಣ ವಾಯುಮಂಡಲವೇ ನಾಶವಾಗುತ್ತಿದೆ .
ಇನ್ನು ಈ ಶಿಥಿಲಗೊಳ್ಳುತ್ತಿರುವ ಓಝೋನ್ ಪದರವನ್ನು ಸರಿಪಡಿಸಲು ಸಾಧ್ಯವಿರುವುದು ಹಚ್ಚ ಹಸಿರಿನ ಮರಗಳಿಂದ ಮಾತ್ರ ಆದರೆ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಿತ್ತೆಸೆದು ಭೂಮಿಯ ಮೈಯನ್ನು ಬರಡು ಮಾಡುತ್ತಿದ್ದಾನೆ ಅದಲ್ಲದೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿದ್ದಾನೆ ಇದೆಲ್ಲವನ್ನು ಅದೆಷ್ಟೆಂದು ಪ್ರಕೃತಿ ಸಹಿಸಿಕೊಳ್ಳುವಳು ಪ್ರಕೃತಿ ಮುನಿದರೆ ತನ್ನ ಮೇಲಾದ ದೌರ್ಜನ್ಯವನ್ನು ತಾನೇ ಸರಿಪಡಿಸಿಕೊಳ್ಳುತ್ತಾಳೆ .
ನದಿ ಎಲ್ಲಿ ಹರಿಯಬೇಕಿತ್ತು ಆ ಸ್ಥಳದಲ್ಲಿ ರಸ್ತೆಗಳನ್ನು ಮಾಡಿದರು ಶುದ್ಧವಾಗಿ ಹರಿಯುತ್ತಿದ್ದ ನೀರನ್ನು ಕಲುಷಿತಗೊಳಿಸಿದೆವು ಈಗ ಅದೇ ನೀರು ನಾವು ನಿರ್ಮಿಸಿದಂತಹ ರಸ್ತೆ ಕಟ್ಟಡ ಮುಂತಾದವುಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ ಹಾಗೆಯೇ ವಿಶಾಲವಾಗಿದ್ದ ಬೆಟ್ಟ ಗುಡ್ಡಗಳನ್ನು ಕೊರೆದು ಒಳ ಮಾರ್ಗವನ್ನು ಮಾಡಿದೆವು. ಆದರೆ ಆ ಪರ್ವತಗಳು ತಮ್ಮ ಮೈಯನ್ನು ಒಮ್ಮೆ ಗೊಡವಿಕೊಂಡರೆ ಮನುಷ್ಯನ ಉಪಟಳಕ್ಕೆ ಪೂರ್ಣವಿರಾಮವನ್ನು ನೀಡುವಷ್ಟು ಶಕ್ತಿ ಪ್ರಕೃತಿಗೆ ಇದೆ ನಮ್ಮೆಲ್ಲರ ಜೀವನವನ್ನು ಉಳಿಸುವ ಬಲವಿರುವುದು ಪ್ರಕೃತಿಗೆ ಮಾತ್ರ ಎಂದಿಗೂ ಪ್ರಕೃತಿ ಮಾನವನಿಗೆ ಹೇಳಬಯಸುವುದು" ಹೇ ಮಾನವ ನೀನು ನನ್ನಿಂದಲೇ ಹೊರತು ನಿನ್ನಿಂದ ನಾನಲ್ಲ".
-ದೀಕ್ಷಾ ಜೆ ರೈ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ