ಕಸಾಪ ಗೋವಾ ರಾಜ್ಯ ಘಟಕದಿಂದ ಎಂಜಿನಿಯರ್ ಗಳ ದಿನಾಚರಣೆ

Upayuktha
0

ಪಣಜಿ: ಬೆಂಗಳೂರು ಮಹಾ ನಗರವು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಸರ್ ಎಂ. ವಿಶ್ವೇಶ್ವರಯ್ಯರವರು ಅಂದು ಹಾಕಿದ್ದ ಅಡಿಪಾಯವೇ ಕಾರಣ. ಎಂಜಿನೀಯರ್‌ಗಳು ದೇಶ ಹಾಗೂ ಸಮಾಜದ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಎಂಜಿನೀಯರ್‌ಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ನಾಗರಾಜ್ ಗೋಂದಕರ್ ಅಭಿಪ್ರಾಯಪಟ್ಟರು.


ಸರ್.ಎಂ.ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆಯ ಅಂಗವಾಗಿ ಕಸಾಪ ಗೋವಾ ರಾಜ್ಯ ಘಟಕದ ವಾಸ್ಕೊ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.


ಸರ್.ಎಂ ವಿಶ್ವೇಶ್ವರಯ್ಯರವರು ಒಬ್ಬ ದೊಡ್ಡ ಎಂಜಿನೀಯರ್ ಆಗಿದ್ದರು. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ ಅಭಿವೃದ್ಧಿಯಲ್ಲಿ ಪ್ರಮುಖವಾದ ತಮ್ಮ ಹೆಜ್ಜೆ ಗುರುತುಗಳನ್ನು ಅವರು ಉಳಿಸಿ ಹೋಗಿದ್ದಾರೆ ಎಂದ ನಾಗರಾಜ ಗೋಂದಕರ್,- ಗೋವಾ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಹೋಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹೊರ ರಾಜ್ಯ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.


ಈ ಸಂದರ್ಭದಲ್ಲಿ ಕಸಾಪ ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್, ಪಣಜಿ ಘಟಕದ ಗೌರವ ಕಾರ್ಯದರ್ಶಿ ಸುರೇಶ್ ಹರಿಶೇಠ, ಕಸಾಪ ಸದಸ್ಯರಾದ ಬಂದೇ ಭಗವಾನ್, ಅಂಬರೀಷ ಕಂದಗಲ್, ಮತ್ತಿತರರು ಉಪಸ್ಥಿತರಿದ್ದರು. 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top