ಮಂಗಳೂರು: ಎಚ್.ಡಿ.ಎಫ್.ಸಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುವ ಉದ್ದೇಶದಿಂದ "ಚಕ್ರಗಳ ಮೇಲೆ ಬ್ಯಾಂಕ್" ಯೋಜನೆಗೆ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಂತೋμï ಕುಮಾರ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್ ಗಳ ಉಗಮ ಸ್ಥಳವಾಗಿದ್ದು ಎಚ್.ಡಿಎಫ್ ಬ್ಯಾಂಕ್ ಚಕ್ರಗಳ ಮೇಲೆ ಬ್ಯಾಂಕ್ ಸೇವೆಯ ಮೂಲಕ ಹಳ್ಳಿ ಹಳ್ಳಿಗಳ ಜನರನ್ನು ತಲುಪಲು ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಹಳ್ಳಿಭಾಗಗಳ ಜನರು ಬ್ಯಾಂಕ್ ಸೇವೆಯನ್ನು ಪಡೆಯುವಂತಾಗಲಿ. ಬಿಸಿ ರೋಡ್, ವಿಟ್ಲ, ಉಜಿರೆ, ಉಪ್ಪಿನಂಗಡಿ, ಪುತ್ತೂರು ಮತ್ತಿತರ 24 ರಿಂದ 40 ಕಿಲೋಮೀಟರ್ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಈ ವಾಹನ ಸೇವೆ ಒದಗಿಸಲಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನದಲ್ಲಿ ಎಟಿಎಂ ಮಾತ್ರವಲ್ಲದೆ ನೂತನ ಅಕೌಂಟ್ ತೆರೆಯುವುದರಿಂದ ಹಿಡಿದು ನಗದು ಠೇವಣಿ, ಡಿಪಾಸಿಟ್, ಲೋನ್ ಸೌಲಭ್ಯ ಕೂಡ ಲಭ್ಯವಿದೆ ಬ್ಯಾಂಕ್ ನಲ್ಲಿ ಲಭ್ಯ ವಿರುವ 21 ರೀತಿಯ ಎಲ್ಲಾ ಸೌಲಭ್ಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‍ನ ಸರ್ಕಲ್ ಹೆಡ್ ಮತ್ತು ಹಿರಿಯ ಉಪಾಧ್ಯಕ್ಷ ಶುಭಂಕರ್ ಬೋಸ್, ದಕ್ಷಿಣ ಕನ್ನಡ ಕ್ಲಸ್ಟರ್ ಹೆಡ್ ಚಂದನ್ ಶಿವಣ್ಣ, ಉಡುಪಿ ಕ್ಲಸ್ಟರ್ ಮುಖ್ಯಸ್ಥ ವಾಸುದೇವ ಪಿ, ಬಿ.ಸಿ.ರೋಡ್-ಬಂಟ್ವಾಳ ಶಾಖ ಮುಖ್ಯಸ್ಥ ಪ್ರಖ್ಯಾತ್ ಶೆಟ್ಟಿ, ಪುತ್ತೂರು ಶಾಖಾ ವ್ಯವಸ್ಥಾಪಕ ಅನೀಶ್ ಶೆಟ್ಟಿ, ಸುರತ್ಕಲ್ ಶಾಖಾ ವ್ಯವಸ್ಥಾಪಕ ಉದಯ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ