ದಿನಗಳೇ ಉರುಳಿವೆ, ವರ್ಷಗಳೇ ಕಳೆದು ಹೋಗುತ್ತಿವೆ. ಕಳೆದು ಹೋದ ದಿನಗಳು ನಿಮಿಷಗಳು ಮತ್ತೆ ಬಾರದೆಂಬುದು ಎಲ್ಲರಿಗೂ ತಿಳಿದಿದ್ದರೂ, ಹಳೆಯ ನೆನಪಲ್ಲೇ ಅದೆಷ್ಟೋ ಮನಸ್ಸುಗಳು ಇಂದಿನ ಖುಷಿಯನ್ನು ಕಳೆದುಕೊಳ್ಳುತ್ತಿವೆ.
ಮಾಡಿದ ತಪ್ಪಿಗೆ ಪರಿತಪಿಸುವ ಬದಲು ಮುಂದೆ ಆ ತಪ್ಪು ಮಾಡದಂತೆ ಮುಂದೆ ಸಾಗುವುದೇ ಜೀವನ. ಮುಂದೆ ಸಾಗಿದಂತೆ ಅದೆಷ್ಟೋ ನೋವು, ಕಷ್ಟಗಳು ಬಂದಾಗ ಅವುಗಳಿಗೆ ಅಂಜದೇ ಧೈರ್ಯದಿಂದ ಎದುರಿಸಿ ನಿಲ್ಲುವುದೇ ಸಾಧನೆ. ಈ ನೋವುಗಳ ಜೊತೆ ಜೊತೆಗೆ ಒಂದಿಷ್ಟು ಖುಷಿ, ಸಂತೋಷಗಳು ಬಂದಾಗ ಅದನ್ನು ಸಂಭ್ರಮಿಸಬೇಕು. ಅವುಗಳೇ ಮುಂದಿನ ಜೀವನಕ್ಕೆ ಹುಮ್ಮಸ್ಸು.
ರಾತ್ರಿಯ ಸಮಯದಲ್ಲೂ ಬೆಳಂದಿಗಳು ನೀಡಲು ಬರುವ ಚಂದ್ರನಂತೆ, ಕಷ್ಟದ ಸಮಯದಲ್ಲಿ ಯಾವುದು ಬೆಳಕು ಬಂದೇ ಬರುತ್ತದೆ. ಕಷ್ಟಗಳು ಅಮವಾಸ್ಯೆಯಂತೆ ಬಂದು ಹೋಗುತ್ತಿರುತ್ತದೆ ಅದಕ್ಕೆ ಹೆದರಬಾರದಷ್ಟೇ.
ನಾವು ಕಳೆದುಕೊಳ್ಳುವುದೆಲ್ಲವೂ ಮುಂದೆ ಯಾವುದನ್ನು ಮುಖ್ಯವಾದುದನ್ನು ಪಡೆದುಕೊಳ್ಳಲು ಎಂಬ ನಂಬಿಕೆಯಲ್ಲಿ ಜೀವನ ಸಾಗಬೇಕಿದೆ. ಅದಕ್ಕೆಲ್ಲಾ ಸಮಯ ಬರಬೇಕಷ್ಟೆ. ಕಾಯುವ ತಾಳ್ಮೆ ನಮ್ಮಲ್ಲಿರಬೇಕು. ಬಂದದ್ದನ್ನೂ ಬಂದ ಹಾಗೇ ಸ್ವೀಕರಿಸಿ ಜೀವನವಂತೂ ಸಾಗಬೇಕಾಗಿದೆ.
- ಭಾಗ್ಯಶ್ರೀ ಕೆ.
ಗೋಳಿತ್ತಟ್ಟು
ವಿವೇಕಾನಂದ ಕಾಲೇಜು, ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ