ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ಬನ್-ಟೀ ಬಿಡುಗಡೆ

Upayuktha
0


ಮಂಗಳೂರು: ಡಾ. ನಾಗತ್ತಿಹಳ್ಳಿ ಚಂದ್ರಶೇಖರ್ ಪ್ರಸ್ತುತ ಪಡಿಸುವ ರಾಧಾಕೃಷ್ಣ ಪಿಕ್ರ‍್ಸ್ನ ಕೇಶವ್ ಆರ್. (ದೇವಸಂದ್ರ) ನಿರ್ಮಾಣದ ಉದಯ್ ಕುಮಾರ್ ನಿರ್ದೇಶನದ "ಬನ್-ಟೀ" ಕನ್ನಡ ಚಲನಚಿತ್ರವು ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಮಂಗಳೂರಿನಲ್ಲಿ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ.


ರವಿಕಿರಣ್ ಅವರ ಚಿತ್ರಕಥೆ-ಸಂಭಾಷಣೆ ಹೊಂದಿರುವ, ರಾಜರಾವ್ ಅಂಚಲ್‌ಕರ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ, ಪ್ರದ್ಯೋತ್ತನ್ ಅವರ ಹಿನ್ನೆಲೆ ಸಂಗೀತವಿರುವ ಈ ಚಿತ್ರದಲ್ಲಿ ಬಾಲ ಕಲಾವಿದರಾಗಿರುವ ಮೌರ್ಯ ಮತ್ತು ಮಂಗಳೂರಿನ ತನ್ಮಯ್ ಆರ್. ಶೆಟ್ಟಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಮಕ್ಕಳ ಮೇಲೆ ಇಡೀ ಚಿತ್ರದ ಕಥೆ ಸಾಗುತ್ತದೆ. ಉಳಿದಂತೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಉಮೇಶ್ ಸಕ್ಕರೆನಾಡ್, ಶ್ರೀದೇವಿ, ನಿಶಾ ಯಶ್‌ರಾಮ್, ಗುಂಡಣ್ಣ ಚಿಕ್ಕಮಗಳೂರು ಮೊದಲಾದವರು ನಟಿಸಿದ್ದಾರೆ.


ನೈಜ ಘಟನೆ ಆಧರಿಸಿ ನಮ್ಮ ಶಿಕ್ಷಣ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ. ಅತ್ಯಂತ ಕುತೂಹಲಕಾರಿಯಾಗಿ ನಾನಾ ಘಟನೆಗಳೊಂದಿಗೆ ಸಾಗುವ ಚಿತ್ರದಲ್ಲಿ ಮಾರಲ್ ಎಜುಕೇಶನ್‌ಗಿಂತ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂಬ ಸೂತ್ರದಡಿ ಶಿಕ್ಷಣ ಸಂಸ್ಥೆ, ಮಕ್ಕಳು, ಹೆತ್ತವರು ನಿಗಾ ಇಡುತ್ತಿರುವ ಬಗ್ಗೆ, ಮಕ್ಕಳಿಗೆ ಕ್ರಿಯೇಟಿವ್ ಎಜುಕೇಶನ್ ನೀಡಬೇಕು ಎಂಬ ಅಂಶಗಳ ಜತೆಗೆ ಭಾವನಾತ್ಮಕವಾಗಿ ಚಿತ್ರ ಮೂಡಿಬಂದಿದೆ. ಬನ್-ಟಿ ಚಿತ್ರೀಕರಣವೂ ವಿಭಿನ್ನ ರೀತಿಯಲ್ಲಿ ನಡೆಸಲಾಗಿದ್ದು, ಎಲ್ಲೂ ಸೆಟ್‌ಗಳನ್ನು ಬಳಸದೇ ಬೆಂಗಳೂರಿನ ರಿಯಲ್ ಲೋಕೇಶನ್‌ಗಳಾದ ಸ್ಲಮ್, ಮಾರ್ಕೆಟ್ ಮುಂತಾದ ಪ್ರದೇಶಗಳಲ್ಲಿ  ಶೂಟಿಂಗ್ ಮಾಡಲಾಗಿದೆ.


ಮಂಗಳೂರಿನ ತನ್ಮಯ್ ಶೆಟ್ಟಿ:

ಮಂಗಳೂರಿನ ಬಾಲ ಕಲಾವಿದ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ತನ್ಮಯ್ ಆರ್ ಶೆಟ್ಟಿ ಬೆಂಗಳೂರಿಗೆ ಆಗಮಿಸಿ ಸುಮಾರು ಒಂದು ತಿಂಗಳ ಕಾಲ ಸ್ಲಮ್‌ನಲ್ಲಿ ನಡೆದ ಶೂಟಿಂಗ್ ಸೇರಿದಂತೆ ನಾನಾ ಲೋಕೇಶನ್‌ನ ಚಿತ್ರೀಕರಣದಲ್ಲಿ ಭಾಗವಹಿಸಿ ಅದ್ಭುತ ಅಭಿನಯ ನೀಡಿದ್ದಾನೆ. ತನ್ಮಯ್ ಈಗಾಗಲೇ  ಮಗನೇ ಮಹಿಷ, ಅಬತರ ತುಳು ಚಿತ್ರಗಳಲ್ಲಿ ನಟಿಸಿದ್ದು, ಬನ್-ಟೀ ಅಲ್ಲದೆ ಕನ್ನಡ ಸಿನಿಮಾಗಳಾದ "ಅಪರಾಧಿ ನಾನಲ್ಲ, "ಕರಿಯಜ್ಜ ಕರಿಹೈದ", "ಸ್ಕೂಲ್ ಲೀಡರ್" ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾನೆ.



ಪತ್ರಿಕಾಗೋಷ್ಠಿಯಲ್ಲಿ ಉದಯ ಕುಮಾರ್ ಪಿ. ಎಸ್., (ನಿರ್ದೇಶಕರು), ಉಮೇಶ್ ಸಕ್ಕರೆನಾಡ್ (ನಟ), ಶ್ರೀದೇವಿ (ನಟಿ), ರಾಜರಾವ್ ಅಂಚಲ್‌ಕರ್ (ಕ್ಯಾಮೆರಾ), ತನ್ಮಯ್ ಆರ್. ಶೆಟ್ಟಿ (ಬಾಲ ನಟ),  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,  ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter     

Post a Comment

0 Comments
Post a Comment (0)
To Top