ಅಂಬಿಕಾ ವಿದ್ಯಾಲಯದ ನಿಯತಿ ಭಟ್‍ಗೆ ಬಹುಮಾನ

Upayuktha
0


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿನಿ ನಿಯತಿ ಭಟ್ ಇವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಘಟಕದ ವತಿಯಿಂದ ಆಯೋಜಿಸಲಾದ ತಾಲೂಕು ದಸರಾ ಕ್ರೀಡಾಕೂಟದಲ್ಲಿ ಆರ್ಟಿಫಿಶಿಯಲ್ ಯೋಗ ಹಾಗೂ ಟ್ರೆಡಿಷನಲ್ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 


ಮುಕ್ರಂಪಾಡಿಯ ಗೋಕುಲ ಲೇಔಟ್‍ನ ಪ್ರವೀಣ ಡಿ ಹಾಗೂ ಚಿತ್ಕಲಗೌರಿ ಕೆ ಇವರ ಸುಪುತ್ರಿಯಾದ ನಿಯತಿ ಪ್ರಸ್ತುತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೆಪ್ಟೆಂಬರ್ 23ರಂದು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಈ ಸ್ಪರ್ಧೆಗಳು ಆಯೋಜನೆಗೊಂಡಿದ್ದವು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter      

Post a Comment

0 Comments
Post a Comment (0)
To Top