ಮುಂಬೈ ಜಿಎಸ್ ಬಿ ಸೇವಾ ಮಂಡಲ ಶ್ರೀ ಗಣೇಶೋತ್ಸವದಲ್ಲಿ ಶಾಸಕ ವೇದವ್ಯಾಸ ಕಾಮತ್ ಭಾಗಿ

Upayuktha
0


ಮಂಗಳೂರು: ದೇಶದ ಪ್ರಖ್ಯಾತ ಗಣೇಶೋತ್ಸವಗಳಲ್ಲಿ ಪ್ರಮುಖವಾಗಿರುವ ಮುಂಬೈ ಮಹಾನಗರದ ಕಿಂಗ್ಸ್ ಸರ್ಕಲ್ ಸಮೀಪದಲ್ಲಿ ಪೂಜಿಸಲ್ಪಡುವ ಜಿ.ಎಸ್.ಬಿ ಸೇವಾ ಮಂಡಲದ 69 ನೇ ಶ್ರೀ ಗಣೇಶೋತ್ಸವದಲ್ಲಿ ಶುಕ್ರವಾರ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪಾಲ್ಗೊಂಡರು.


ಕುಟುಂಬ ಸಮೇತ ತುಲಾಭಾರ ಸೇವೆ ಸಮರ್ಪಿಸಿ ಮಾತನಾಡಿದ ವೇದವ್ಯಾಸ ಕಾಮತ್ ಅವರು ಜಿ ಎಸ್ ಬಿ ಸೇವಾ ಮಂಡಲದ ಗಣೇಶೋತ್ಸವದಲ್ಲಿ ಪ್ರತಿ ವರ್ಷ ಪಾಲ್ಗೊಳ್ಳುವ ಭಾಗ್ಯ ದೇವರ ಕೃಪೆಯಿಂದ ಸಿಗುತ್ತಿದೆ. ಈ ಬಾರಿ ನಮ್ಮ ಇಡೀ ಕುಟುಂಬ, ಆಪ್ತ ಬಳಗ, ಹಿತೈಷಿಗಳ ಸಮೇತ ಮಂಗಳೂರಿನಿಂದ ಆಗಮಿಸುವ ಅವಕಾಶ ಸಿಕ್ಕಿದೆ. ಎರಡನೇ ಬಾರಿ ಶಾಸಕನಾಗಿ ಕ್ಷೇತ್ರದ ಜನರ ಸೇವೆ ಸಲ್ಲಿಸುವ ಅವಕಾಶ ಭಗವಂತ ಕರುಣಿಸಿದ್ದಾನೆ. ಕ್ಷೇತ್ರದ ಅಭಿವೃದ್ಧಿ, ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಲಾಯಿತು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.


ಶಾಸಕರೊಂದಿಗೆ ಅವರ ಹಿರಿಯ ಸಹೋದರ ವಾಸುದೇವ್ ಕಾಮತ್, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ವಸಂತ ಪೂಜಾರಿ, ಸಂಜಯ್ ಪೈ, ಕುಟುಂಬ ವರ್ಗ, ಆಪ್ತ ಸಹಾಯಕರು ಉಪಸ್ಥಿತರಿದ್ದರು.


ಮುಂಬೈ ಜಿಎಸ್ ಬಿ ಗಣೇಶೋತ್ಸವದಲ್ಲಿ ಪೂಜಾ ಹೆಗ್ಡೆ

ಮುಂಬೈ ಕಿಂಗ್ಸ್ ಸರ್ಕಲ್ ಸಮೀಪ ಜಿಎಸ್ ಬಿ ಸೇವಾ ಮಂಡಲದಿಂದ ಪೂಜಿಸಲ್ಪಡುವ 69 ನೇ ಶ್ರೀ ಗಣೇಶೋತ್ಸವದಲ್ಲಿ ಖ್ಯಾತ ನಾಯಕಿ ನಟಿ ಪೂಜಾ ಹೆಗ್ಡೆ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ ಪೂಜಾ ಹೆಗ್ಡೆ, ಜಿಎಸ್ ಬಿ ಸೇವಾ ಮಂಡಲದಲ್ಲಿ ದೇವರನ್ನು ಪ್ರಾರ್ಥಿಸುವುದೇ ದಿವ್ಯ ಅನುಭವ. ಇಲ್ಲಿ ಪ್ರತಿ ವರ್ಷ ಬಂದು ಗಣಪತಿಯ ಆರ್ಶೀವಾದ ಪಡೆಯುತ್ತೇನೆ. ಇದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಇಲ್ಲಿ ಬರಲು ಅವಕಾಶ ಸಿಕ್ಕಿರುವುದು ಪುಣ್ಯ. ಇಲ್ಲಿ ಬಹಳ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯುತ್ತದೆ ಎಂದು ಪೂಜಾ ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ಮಂಡಲದ ಪ್ರಮುಖರು, ಗಣ್ಯರು, ಕಾರ್ಯಕರ್ತರು, ಭಕ್ತರು ‌ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top