ವಿದ್ಯಾಗಿರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರವೇಶಾತಿಯ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ.
ಆಳ್ವಾಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕ.ರಾ.ಮು.ವಿ)ದ ಸುಸಜ್ಜಿತ ಕಲಿಕಾರ್ಥಿ ಸಹಾಯ ಕೇಂದ್ರ ಇದೆ. ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಆಳ್ವಾಸ್‍ನಲ್ಲಿ ಸುಸಜ್ಜಿತ ಪರೀಕ್ಷಾ ಕೇಂದ್ರವನ್ನೂ ಹೊಂದಿರುವ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿಂದೆ ಆಗಸ್ಟ್ 31 ಅಂತಿಮ ದಿನಾಂಕವಾಗಿತ್ತು.
ಹೆಚ್ಚಿನ ಮಾಹಿತಿಗೆ administration@alvas.org, ಮೊ.7090715010 ಅಥವಾ ಇಮೇಲ್ ao@alvascollege.com ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ