ಆಳ್ವಾಸ್ ಪ.ಪೂ ವಾಣಿಜ್ಯ ವಿಭಾಗ : ಪೋಷಕ ಶಿಕ್ಷಕರ ಸಭೆ

Upayuktha
0


ವಿದ್ಯಾಗಿರಿ: ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ಆಳ್ವಾಸ್ ಪದವಿ ಪೂರ್ವ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡ ಪೋಷಕ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು. ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ರೂಢಿಸಿಕೊಳ್ಳಬೇಕು ಎಂದ ಅವರು, ಪೋಷಕರು ತಮ್ಮ ಮಕ್ಕಳ ಸಾಮಥ್ರ್ಯ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು ಎಂದರು


ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಒಬ್ಬ ವ್ಯಕ್ತಿಗೆ ಸಿಗಬಹುದಾದ ಅತಿದೊಡ್ಡ ಬೆಂಬಲ, ಪ್ರೋತ್ಸಾಹವು ತಂದೆ- ತಾಯಿಯರದ್ದು. ಅದು ಅವರ ಬದುಕಿನ ತ್ಯಾಗವೂ ಹೌದು ಎಂದು ಹೇಳಿದರು.


ತಂದೆ-ತಾಯಿ ತಮ್ಮ ಮಕ್ಕಳಲ್ಲಿ ತಮ್ಮ ಯಶಸ್ಸನ್ನು ಕಾಣುತ್ತಾರೆ. ಮಕ್ಕಳಲ್ಲಿ ಬದಲಾವಣೆ ತರಲು ಪೋಷಕರು ಆಶಿಸಿದಲ್ಲಿ, ಅದು ಪದವಿ ಪೂರ್ವ ಶಿಕ್ಷಣದಲ್ಲಿ ಸಾಧ್ಯ. ಮಕ್ಕಳಿಗೆ ಸಮಯ ನೀಡಿ ಎಂದರು.


ಜೀವನದಲ್ಲಿ ಗುರಿ ಮುಖ್ಯ. ಭರವಸೆ ಇರಬೇಕು. ಒತ್ತಡ ಸೃಷ್ಟಿಯಾದರೆ ಇತರರ ಜೊತೆ ಚರ್ಚಿಸಬೇಕು. ಸುಂದರ ಮನಸ್ಸನ್ನು ಕಟ್ಟಿಕೊಳ್ಳಿ. ಅದಕ್ಕಾಗಿ ಆಳ್ವಾಸ್ ಪರಿಸರ ಇದೆ ಎಂದರು. ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 20 ಹಿರಿಯ ವಿದ್ಯಾರ್ಥಿಗಳು,  ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ  49 ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  


ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಸದಾಕತ್ ಸ್ವಾಗತಿಸಿದರು.  ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು. ಉಪಪ್ರಾಂಶುಪಾಲೆ ಝಾನ್ಸಿ ಪಿ ಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ, ಕಲಾ ವಿಭಾಗದ ಡೀನ್ ಶೆಟ್ಟಿ ಇದ್ದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top