
ಮಂಗಳೂರು: ಶ್ರೀನಿವಾಸ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ವತಿಯಿಂದ ಓಣಂ ಹಬ್ಬವನ್ನು ಸಂಭ್ರಮ ಮತ್ತು ವೈಭವದಿಂದ ಆಚರಿಸಲಾಯಿತು. "ಆರಾಟ್" ಎಂದು ಹೆಸರಿಸಲಾದ ಈ ಕಾರ್ಯಕ್ರಮ ಸೆಪ್ಟೆಂಬರ್ 2, 2023 ರಂದು ಹೋಟೆಲ್ ಶ್ರೀನಿವಾಸ್ ಮತ್ತು ಹೋಟೆಲ್ ಕೃಷ್ಣಭವನ ಮಂಗಳೂರಿನಲ್ಲಿ ನಡೆಯಿತು.
ಪ್ರೊ.ಇಆರ್.ಶ್ರೀಮತಿ. ಎ.ಮಿತ್ರಾ ಎಸ್.ರಾವ್ ಟ್ರಸ್ಟಿ ಸದಸ್ಯೆ, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ ಅವರು ಕಾರ್ಯಕ್ರಮ ಉದ್ಘಾಟಿಸಿ, ಯುವ ಪೀಳಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿರುವುದನ್ನು ನೋಡುವುದೇ ಸಂತಸ ತಂದಿದೆ ಎಂದ ಅವರು, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಓಣಂ, ಆಚರಣೆಯ ಹಬ್ಬವಾಗಿರುವುದರಿಂದ, ನಮ್ಮ ಪರಂಪರೆಯನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಂಗಳೂರಿನ ಶಾರದಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಮಹಾಬಲೇಶ್ವರ ಭಟ್ ಮಾತನಾಡಿ, ಕೇರಳೀಯರು ಎಲ್ಲಿ ನೆಲೆಸಿದ್ದರೂ ತಮ್ಮ ಜನ, ಸಂಸ್ಕೃತಿ, ಸಂಪ್ರದಾಯಗಳನ್ನು ನಿರಂತರವಾಗಿ ಎತ್ತಿ ಹಿಡಿಯುವ ಮೂಲಕ ಏಕತೆಯ ದೃಢ ಭಾವನೆಗೆ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ.
ಕಾರ್ಯಕ್ರಮವು ನೃತ್ಯ ಪ್ರದರ್ಶನ, ಟಗ್ ಆಫ್ ವಾರ್, ರೋಮಾಂಚಕ ಸಂಗೀತ ಮತ್ತು ವರ್ಣರಂಜಿತ ವೇಷಭೂಷಣಗಳೊಂದಿಗೆ ಹಬ್ಬದ ಉತ್ಸಾಹವನ್ನು ಹೆಚ್ಚಿಸಿದರು.
ಏವಿಯೇಷನ್ ಸ್ಟಡೀಸ್ ಸಂಸ್ಥೆಯ ಡೀನ್ ಡಾ.ಪವಿತ್ರಾ ಕುಮಾರಿ, ವಿದ್ಯಾರ್ಥಿ ಪರಿಷತ್ ಸಾಂಸ್ಕೃತಿಕ ಕಾರ್ಯದರ್ಶಿ ಅನುಷಾ ಎಸ್.ಆಚಾರ್ಯ, ಅಧ್ಯಾಪಕರು ಉಪಸ್ಥಿತರಿದ್ದರು.
ನೈತಿಕ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ಸ್ವಾಗತಿಸಿ, ಭವ್ಯಶ್ರೀ ಬಿ., ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷೆ ವಂದಿಸಿದರು. ಪ್ರತೀಕ್ಷಾ ಎಸ್.ಶೆಟ್ಟಿ ಮತ್ತು ರಾಜೇಶ್ವರಿ ಪಿ. ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆನಂದಿಸಿದರು. ಸಧ್ಯಂ ಎಂದು ಕರೆಯಲ್ಪಡುವ ಕೇರಳದ ಸಾಂಪ್ರದಾಯಿಕ ಔತಣವನ್ನು ಬಡಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ