ಮಹಿಳೆಗೆ ದೊರೆಯದ ಸಮಾನತೆ: ಡಾ.ಮಾಲಿನಿ ಹೆಬ್ಬಾರ್

Upayuktha
0

ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ



ವಿದ್ಯಾಗಿರಿ: ‘ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ವೇಗ ಪಡೆದಿದ್ದರೂ, ಮಹಿಳೆಗೆ ಮಾತ್ರ ಇನ್ನೂ ಸಮಾನತೆ ದೊರೆತಿಲ್ಲ’ ಎಂದು ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಪ್ರಾಂಶುಪಾಲೆ ಡಾ.ಮಾಲಿನಿ ಹೆಬ್ಬಾರ್ ಅಭಿಪ್ರಾಯಪಟ್ಟರು. 


ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಾಭಿವೃದ್ಧಿ ಸಮಿತಿ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಹೆಣ್ತನದ ಮರುಚಿತ್ರಣ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.


‘ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) ಅಧ್ಯಯನ ಪ್ರಕಾರ 2006ರಿಂದ ಈವರೆಗೆ ಮಹಿಳಾ ಸಮಾನತೆಯ ನಿಟ್ಟಿನಲ್ಲಿ ಶೇ 4.1 ರಷ್ಟು ಮಾತ್ರ ಪ್ರಗತಿಯಾಗಿದೆ. ಶೇ 100 ಸಾಧನೆ ಮಾಡಲು ಇನ್ನೂ 169 ವರ್ಷಗಳು ಬೇಕು’ ಎಂದರು. 

‘ತಪ್ಪನ್ನು ಪ್ರಶ್ನಿಸುವ ಹಾಗೂ ತಪ್ಪು ಮಾಡಿದವರನ್ನು ಶಿಕ್ಷಿಸುವ ಸಮಾಜ ಇದ್ದಾಗ ಸಮಾನತೆ ಕಡೆಗೆ ಹೆಜ್ಜೆ ಇಡಲು ಸಾಧ್ಯ’ ಎಂದು ಅವರು ವಿಶ್ಲೇಷಿಸಿದರು. 


‘ಕಾಳಜಿಯ ಕೆಲಸಕ್ಕೆ ಸಂಬಳ ಪಡೆಯದ ಸಿಬ್ಬಂದಿಯೇ ‘ಮಹಿ¼’É. ಜಗತ್ತಿನ ಸುಮಾರು 18 ದೇಶಗಳಲ್ಲಿ ಪತ್ನಿ ಉದ್ಯೋಗಕ್ಕೆ ಹೋಗಬೇಕಾದರೆ, ಪತಿಯ ಅನುಮತಿ ಅಗತ್ಯವಾಗಿದೆ. ಬಹುತೇಕ ಜಾಹೀರಾತು ಹಾಗೂ ಸಿನಿಮಾಗಳಲ್ಲಿ ಮಹಿಳೆ ಹಾಸ್ಯದ ಸರಕಾಗಿದ್ದಾಳೆ. ಮಹಿಳೆಗೆ ಸ್ವಾಭಿಮಾನ ಹಾಗೂ ಸ್ವಯಂ ತೃಪ್ತಿ ಅವಶ್ಯ’ ಎಂದರು. 


‘ಫೋಬ್ರ್ಸ್ ವರದಿ ಪ್ರಕಾರ ಜಗತ್ತಿನಲ್ಲಿ 337 ಬಿಲಿಯಾಧಿಪತಿ ಮಹಿಳೆಯರು ಇದ್ದಾರೆ. ಆದರೆ, ಲಿಂಗ ಪಕ್ಷಪಾತವನ್ನು ಕೆಲವೊಮ್ಮೆ ಮಹಿಳೆಯರೇ ಅರಿವಿಲ್ಲದಂತೆ ಆಚರಿಸುತ್ತಾರೆ’ ಎಂದ ಅವರು, ‘ಮನೆಯ ಜವಾಬ್ದಾರಿಯನ್ನೂ ಪುರುಷರೂ ಹಂಚಿಕೊಳ್ಳಬೇಕು. ಸಮಾನತೆ ಮತ್ತು ನ್ಯಾಯ ಅವಶ್ಯ’ ಎಂದು ಪ್ರತಿಪಾದಿಸಿದರು.  

‘ಅಡೆತಡೆಗಳನ್ನು ಒಡೆಯಿರಿ’ ಎಂಬುದು 2023ರ ಮಹಿಳಾ ಸಶಕ್ತೀಕರಣ ಧ್ಯೇಯ ವಾಕ್ಯವಾಗಿದೆ’ ಎಂದರು. 


ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ಮಾತನಾಡಿ, ‘ ಆಡಳಿತದ ನಿಯಮಗಳನ್ನೇ ‘ನಿರ್ಬಂಧ’ ಎಂದು ಅರ್ಥೈಸಿಕೊಳ್ಳಬಾರದು. ಎಲ್ಲರ ಒಳಿತಿಗಾಗಿ ಕೆಲವು ನಿರ್ಬಂಧಗಳನ್ನು ಹಾಕುವುದು ಅನಿವಾರ್ಯ ಆಗುತ್ತದೆ. ಆದರೆ, ಅಸಮಾನತೆ, ಕೆಟ್ಟ ಉದ್ದೇಶಗಳಿಂದ ಯಾವುದೇ ನಿಯಮ ಅಥವಾ ನಿರ್ಬಂಧವನ್ನು ರೂಪಿಸುವುದು ತಪ್ಪು’ ಎಂದರು. 


‘ನಾವು ಯಾವತ್ತು ಧನಾತ್ಮಕ ಹಾಗೂ ಸಮಾಜಮುಖಿಯಾಗಿ ಚಿಂತಿಸಬೇಕು. ಎಲ್ಲ ರೀತಿಯ ಜನ ನಮ್ಮ ಸುತ್ತಮುತ್ತ ಇರುತ್ತಾರೆ. ನಾವು ಒಳಿತನ್ನು ಆಶಿಸಬೇಕು’ ಎಂದರು. 


ಉಪ ಪ್ರಾಂಶುಪಾಲೆ ಝಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಮಹಿಳಾ ಕ್ಷೇಮಾಭಿವೃದ್ಧಿ ಸಮಿತಿ ಸಂಯೋಜಕಿ ವಿನೆಟ್ ಚಂದನ ಮಸ್ಕರೇನಸ್ ಇದ್ದರು. 


ವಿದ್ಯಾರ್ಥಿನಿ ಇಶಿಕಾ ಸ್ವಾಗತಿಸಿ, ಅಹನಾ ನಿರೂಪಿಸಿದರು. ಸಿರಿಗೌರಿ ವಂದಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top