ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ

Upayuktha
0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ, ಹಿಂದಿ ಹಾಗೂ ಕನ್ನಡ ಭಾಷೆಗಳ ಸಂಹಿಕ ಭಾಷಾ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಕುಂದಾಪ್ರ ಕನ್ನಡದ ಗಮ್ಮತ್ತು ಕಾರ್ಯಕ್ರಮ ಸಂಪನ್ನವಾಯಿತು. 


ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಕುಂದಾಪ್ರ ಕನ್ನಡದ ವಿಶೇಷತೆ ತಿಳಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ ಹಾಗೂ ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಇದರ ಯೋಜನಾಧಿಕಾರಿ  ಪ್ರದೀಪ್ ಶೆಟ್ಟಿ, ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಹೇಶಕುಮಾರ ಶೆಟ್ಟಿ, ಹರೀಶ್ ಶೆಟ್ಟಿಯವರು ಕುಂದಾಪ್ರ ಕನ್ನಡದ ಸೊಗಡಿನ ಬಗ್ಗೆ ವಿವರಿಸಿದರು. ಉಪನ್ಯಾಸಕರಾದ ಡಾ.ಪ್ರಸನ್ನಕುಮಾರ ಐತಾಳ್, ಅಮೃತಾ ಶೆಟ್ಟಿ, ಅಭಿಜ್ಞಾ ಉಪಾಧ್ಯಾಯ ಹಾಗೂ ಗೃಹಿಣಿ ಅರ್ಚನಾ ನಾಯಕ್ ಅವರು ಕುಂದಾಪ್ರ ಕನ್ನಡ ಹಾಡಿನೊಂದಿಗೆ ಕೆಲವು ಕುಂದಾಪ್ರ ಕನ್ನಡದ ರಸ ಸನ್ನಿವೇಶಗಳನ್ನು ತಿಳಿಸಿದರು.


ವಿದ್ಯಾರ್ಥಿಗಳಾದ ಸಂಕೀತಾ ಶೆಟ್ಟಿ, ಅನ್ವಿತಾ,  ಧಾತ್ರಿ, ನಿಶಾ, ಧನ್ಯಾ, ಸುಭಾಷ್, ಅಪರ್ಣಾ, ಗುರುದತ್ತ ಚಾತ್ರ ಹಾಗೂ ಪ್ರದೀಪ ಇವರು ವಿವಿಧ ಸಮೂಹ ಗೀತೆಗಳ ಗಾಯನ, ಪ್ರಹಸನಗಳ ಮೂಲಕ ಕುಂದಾಪ್ರ ಕನ್ನಡದ ಕಂಪನ್ನು ಬೀರಿದರು. ಅಕ್ಷತಾ ಎಂ. ಜಿ, ಸೃಷ್ಠಿ ಎಸ್.ಎಲ್ ಹಾಗೂ ಧಾತ್ರಿ ಪ್ರಾರ್ಥಿಸಿದರು.


ಸಭೆಯಲ್ಲಿ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಶ್ ಕೆ, ಅಭ್ಯಾಗತ ಅನಿಲ್ ಶೆಟ್ಟಿ, ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಸಂಹಿಕ ಭಾಷಾ ವೇದಿಕೆಯ ಸಂಯೋಜಕರಾದ  ನಾಗರಾಜ್ ಬಿ, ಉಪನ್ಯಾಸಕ ದೀಕ್ಷಿತ್ ರೈ, ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ರಾ.ಸೇ ಯೋಜನೆಯ ನಾಯಕ ಸುದರ್ಶನ ನಾಯಕ್  ಉಪಸ್ಥಿತರಿದ್ದರು.


ಕಾರ್ಯಕ್ರಮ ಸಂಯೋಜಕರಾದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿ, ಸ್ವಯಂ ಸೇವಕಿ ಪಲ್ಲವಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top