ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು: ರಾಷ್ಟ್ರೀಯ ಕಾರ್ಯಕ್ರಮ 'ನನ್ನ ಮಣ್ಣು ನನ್ನ ದೇಶ' ಸಂಪನ್ನ

Upayuktha
0

ಉಜಿರೆ: ಸ್ವಾತಂತ್ರ್ಯಕ್ಕಾಗಿ ಅನೇಕ ನಾಯಕರ ಪ್ರಜೆಗಳ ತ್ಯಾಗ ಬಲಿದಾನ ಮಾಡಿದ್ದಾರೆ. ಅವರನ್ನೆಲ್ಲ ನಾವು ನಿತ್ಯ ಸ್ಮರಿಸಬೇಕು. ಸ್ವಾತಂತ್ರ್ಯದ ಅನಂತರ ಎಲ್ಲ ಕ್ಷೇತ್ರಗಳಲ್ಲಿ ಅನೇಕ ಸಾಧನೆಗಳಿಗೆ ಭಾರತ ಸಾಕ್ಷಿಯಾಗುತ್ತಿದೆ. ಇನ್ನೂ ಸಹ ಜೀವಂತವಿರುವ ಅಸಮಾನತೆ, ಭ್ರಷ್ಟಾಚಾರ, ದೌರ್ಜನ್ಯಗಳನ್ನು ತೊಡೆದುಹಾಕಬೇಕು. ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ವಿಶೇಷವಾಗಿ ಯುವಕರು ಮನಸ್ಸು ಮಾಡಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಎನ್.ಪಿ ತಂಗಚ್ಚನ್ ಧರ್ಮಸ್ಥಳ ಹೇಳಿದರು. 


ಇವರು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ 'ನನ್ನ ಮಣ್ಣು ನನ್ನ ದೇಶ' ಎಂಬ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 



ಇದೇ ಸಂದರ್ಭದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೇ ಹೊರತು ವೈಷಮ್ಯ ಕೂಡದು ಎಂದು ಕರೆನೀಡಿದರು. 


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಇಂದಿನ ಯುವಕರು ಓದಬೇಕು. ದೇಶ ರಕ್ಷಿಸುವ ಯೋಧರಿಗೆ ಗೌರವ ಕೊಡಬೇಕು. ದೇಶದ ವಿಭಜನೆಗೆ ಪ್ರಯತ್ನಿಸುವ ಶಕ್ತಿಗಳನ್ನು ತೊಲಗಿಸುವಂತೆ ಮಾಡಬೇಕು ಎಂದರು. 


ಇದೇ ಸಂದರ್ಭದಲ್ಲಿ ರಾಷ್ಟ್ರಧ್ವಜ ವಂದನೆ, ಪಂಚಪ್ರಾಣ ಪ್ರತಿಜ್ಞೆ, ಅಮೃತ ಉದ್ಯಾನವನ ರಚನೆ, ವೀರ ಯೋಧರ ಸ್ಮರಣಾರ್ಥ ಫಲಕದ ಅನಾವರಣ, ಸ್ವಾತಂತ್ರ್ಯೋತ್ಸವದ ಭಿತ್ತಿಪತ್ರ ಅನಾವರಣ ಮುಂತಾದ ಕಾರ್ಯವನ್ನು ಅಧ್ಯಕ್ಷರು ಹಾಗೂ ಅಭ್ಯಾಗತರು ನೆರವೇರಿಸಿದರು. 


ವಿದ್ಯಾರ್ಥಿ ಬೋರೇಶ ಅವರು ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಮಹಾಲಕ್ಷ್ಮೀ ಹಾಗೂ ಪಲ್ಲವಿ ಬಳಗದಿಂದ ದೇಶಭಕ್ತಿಗೀತೆಯ ಗಾಯನ ನಡೆಯಿತು. ರಾ.ಸೇ ಯೋಜನೆಯ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು. 


ರಾ. ಸೇ ಯೋಜನೆಯ ಘಟಕದ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರಂತ ಸಾಗರ್ ಜೈನ್ ಸ್ವಾಗತಿಸಿ, ದುತಿಯಾ ವಂದಿಸಿದರು. ಆದಿತ್ಯ ವಿ. ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top